ವಿಜಯಪುರ: ಸಿಡಿಲು ಬಡಿದು ಆಕಳು ಅಸುನೀಗಿರುವ ಘಟನೆ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲ್ಲೂಕಿನ ಮನಗೂಳಿ ಗ್ರಾಮದಲ್ಲಿ ಗುರುವಾರ ನಡೆದಿದೆ. ಮನಗೂಳಿಯ ಗ್ರಾಮದ ಪಾಂಡು ಜಾಧವ ಎಂಬವರಿಗೆ ಸೇರಿದ ಆಕಳು ಮೃತಪಟ್ಟಿದೆ. ತೋಟದಲ್ಲಿದಾಗ ಸಿಡಿಲು ಬಡಿದು ಆಕಳು ಸಾವನ್ನಪ್ಪಿದೆ. ಮನಗೂಳಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.