ವಿಜಯಪುರ: ಹಾಡಹಗಲೆ 2 ಲಕ್ಷದ 20 ಸಾವಿರ ನಗದನ್ನು ಕಳ್ಳರು ದೋಚಿಕೊಂಡು ಎಸ್ಕೇಪ್ ಆಗಿರುವ ಘಟನೆ ವಿಜಯಪುರ ಜಿಲ್ಲೆಯ ತಾಳಿಕೋಟಿ ಪಟ್ಟಣದಲ್ಲಿ ನಡೆದಿದೆ. ಬ್ಯಾಂಕ್ ಖಾತೆಯಲ್ಲಿಟ್ಟಿದ್ದ ಹಣವನ್ನು ನಾಗಪ್ಪ ಡ್ರಾ ಮಾಡಿಕೊಂಡಿದ್ದಾರೆ. ತದನಂತರ ಹಣವನ್ನು ಬೈಕ್ ನಲ್ಲಿ ಹಣ ಇಟ್ಟಿದ್ದಾರೆ. ಆಗ ಗಮನ ಬೇರೆಡೆ ಸೆಳೆದು ಖದೀಮರು ಹಣವನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ. ಈ ಘಟನೆ ನಿನ್ನೆ ಬೆಳಿಗ್ಗೆ 11: 30ಕ್ಕೆ ನಡೆದಿದೆ. ತಾಳಿಕೋಟೆ ತಾಲೂಕಿನ ಕೊಡಗಾನೂರ ಗ್ರಾಮದ ಬಸವೇಶ್ವರ ಪ್ರೌಢ ಶಾಲೆಯಲ್ಲಿ ಎಸ್ಡಿಸಿಯಾಗಿ ನಾಗಪ್ಪಾ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ತಾಳಿಕೋಟೆ ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.