ವಿಜಯಪುರ: ಉತ್ತರ ಕರ್ನಾಟಕ ಭಾಗದಲ್ಲಿ ಜಾತ್ರೆಗಳ ವೈಶಿಷ್ಟ್ಯವೆ ಬೇರೆ. ಅದರಲ್ಲು ವಿಜಯಪುರ ಮುದ್ದೇಬಿಹಾಳ ತಾಲೂಕಿನ ಕವಡಿಮಟ್ಟಿ ಗ್ರಾಮದಲ್ಲಿ ನಡೆಯುವ ಬಡಿಗೆ ಜಾತ್ರೆ ನೋಡುಗರನ್ನ ರೋಮಾಂಚನಗೊಳಿಸುತ್ತೆ. ಪ್ರತಿ ಮೂರು ವರ್ಷಕ್ಕೊಮ್ಮೆ ನಡೆಯುವ ಈ ಜಾತ್ರೆಯಲ್ಲಿ ಗ್ರಾಮಸ್ಥರು ಪರಸ್ಪರ ಬಡಿಗೆಗಳಿಗೆ ಹೊಡೆದಾಡಿಕೊಳ್ತಾರೆ, ವಿಚಿತ್ರ ಅಂದ್ರೆ ಯಾರಿಗೂ ಸಹ ಗಾಯವಾಗೊಲ್ಲ ಅನ್ನೋದು. ಜುಮ್ಮಣ್ಣ ಎನ್ನುವ ಪವಾಡ ಪುರುಷರ ಜಾತ್ರೆಯನ್ನ ಬಡಿಗೆಗಳಿಂದ ಹೊಡೆದಾಡಿಕೊಳ್ಳುವ ಮೂಲಕ ಆಚರಿಸುವ ಪದ್ದತಿ ಇದೆ. ಪರಸ್ಪರ ಬಡಿಗೆಗಳಿಂದ ಹೊಡೆದಾಡಿಕೊಳ್ಳುವ ಬಡಿಗೆಗಳು ಮುರಿಯುತ್ತವೆ ಹೊರತು ಜನರಿಗೆ ಯಾವುದೆ ಗಾಯ, ಪೆಟ್ಟುಗಳು ಆಗೋದಿಲ್ಲ, ಇದನ್ನ ಅಜ್ಜನ ಪವಾಡ ಎನ್ನಲಾಗುತ್ತೆ. ಬ್ರೀಟಿಷರ ಕಾಲದಲ್ಲಿ ಪವಾಡ ಪುರುಷರಾಗಿದ್ದ ಜುಮ್ಮಣ್ಣ ಅಜ್ಜ ಬಡಿಗೆಗಳಿಂದ ಬ್ರೀಟಿಷರನ್ನ ಎದುರಿಸಿದ್ದರು, ಅಂದಿನಿಂದ ಕವಡಿಮಟ್ಟಿ ಗ್ರಾಮದಲ್ಲಿ ಬಡಿಗೆ ಜಾತ್ರೆ ಆಚರಿಸಲಾಗುತ್ತದೆ.