ಬಾಗಲಕೋಟೆ: ಯುವತಿಯನ್ನು ಭೀಕರವಾಗಿ ಕೊಲೆಗೈದಿರುವ ಘಟನೆ ಬಾಗಲಕೋಟ ಜಿಲ್ಲೆಯ
ಬೀಳಗಿ ತಾಲ್ಲೂಕಿನ ಹಳೇ ತಳ್ಳಿಕೇರಿಯಲ್ಲಿ ನಡೆದಿದೆ. ಹಂತಕರು ಸುಮಾರು 20-25 ವಯಸ್ಸಿನ ಯುವತಿಯ ರುಂಡ-ಮುಂಡ ಬೇರ್ಪಡಿಸಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಬೀಳಗಿ ತಾಲ್ಲೂಕಿನ ಹಳೇ ತಳ್ಳಿಕೇರಿಯಲ್ಲಿ ಯುವತಿಯ ಶವ ಪತ್ತೆಯಾಗಿದೆ. ಯುವತಿ ಪಿಂಕ್ ಬಣ್ಣದ ಉದ್ದ ತೋಳಿನ ಶರ್ಟ್, ಜೀನ್ಸ್ ಪ್ಯಾಂಟ್ ಧರಿಸಿದ್ದು, ಟೀ ಶರ್ಟ್ ಮೇಲೆ ಸ್ಮೈಲ್ ಎಂಬ ಬರಹ ಇದೆ. ಯುವತಿ ಪತ್ತೆಗಾಗಿ ಬೀಳಗಿ ಪೊಲೀಸರಿಂದ ಹರಸಾಹಸ ಪಡುತ್ತಿದ್ದಾರೆ. ಬೀಳಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಹತ್ಯೆ ನಡೆದಿದೆ.