ವಿಜಯಪುರ: ಲೋಕಸಭಾ ಎಲೆಕ್ಷನ್ ಬಳಿಕ ರಾಜ್ಯ ಸರ್ಕಾರ ಪತನ ವಾಗಲಿದೆ ಎಂದು ವಿಜಯಪುರದ ಸಂಸದ ರಮೇಶ ಜಿಗಜಿಣಗಿ ಭವಿಷ್ಯ ನುಡಿದರು. ವಿಜಯಪುರ ನಗರದಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ಸರ್ಕಾರ ಕೊಲ್ಯಾಪ್ಸ್ ಆಗಲಿದೆ. ಚುನಾವಣೆ ಬಳಿಕ ಸರ್ಕಾರ ಬೀಳೋದು ಗ್ಯಾರಂಟಿ ಎಂದರು. ಯಾರು ಏನು ಮಾಡೋದು ಬೇಡ ತನ್ನಿಂದ ತಾನೇ ಬೀಳಲಿದೆ. ಸರ್ಕಾರ ಮಾತ್ರ ಉಳಿಯೋದಿಲ್ಲ ಎಂದು ಭವಿಷ್ಯ ನುಡಿದರು. ಇನ್ನೂ ಪ್ರಜ್ವಲ್ ಕೊನೆಗು ಅರೆಸ್ಟ್ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ ಪ್ರಜ್ವಲ್ ಕೇಸ್ ಬಿಜೆಪಿಗೆ ಡ್ಯಾಮೇಜ್ ಅಲ್ಲಾ, ಚುನಾವಣೆ ಮೇಲೆ ಏನೇನು ಡ್ಯಾಮೇಜ್ ಆಗಲ್ಲ ಎಂದರು. ಪ್ರಜ್ವಲ್ ಎನ್ಕ್ವೈರಿ ಮುಗಿದ ಮೇಲೆ ಪ್ರಕರಣ ಹಣೆಬರಹ ಹೊರ ಬೀಳಲಿದೆ. ಪೆನ್ಡ್ರೈವ್ ಕೇಸ್ ಹಿಂದೆ ಯಾರಿದ್ದಾರೆ ದೇಶಕ್ಕೆ ಗೊತ್ತಾಗಲಿದೆ. ಅಲ್ಲಿಯವರೆಗೆ ಸಮಾಧಾನದಿಂದ ಇರಿ ಎಂದರು. ಚುನಾವಣೆ ಮೇಲೆ ಗ್ಯಾರಂಟಿ ಪ್ರಭಾವ ಆಗಿಲ್ಲಾ, ಗ್ಯಾರಂಟಿ ಮೂಲಕ ಕಾಂಗ್ರೆಸ್ ಮನೆಗಳಲ್ಲಿ ಜಗಳ ಹಚ್ಚಿದೆ, ಕಳ್ಳರು ಅತ್ತೆ ಸೊಸೆಗೆ ಜಗಳ ಹಚ್ಚಿಟ್ಟಿದ್ದಾರೆ. ನಾವು ಅಂತದ್ದೇನು ಮಾಡಿಲ್ಲ ಜಗತ್ತಿಗೆ ಮೋದಿಯೇ ಗ್ಯಾರಂಟಿ, ಗ್ಯಾರಂಟಿಯಿಂದಾಗಿ ನನಗೆ ಸೋಲು ಎನ್ನೋದು ಸುಳ್ಳು, ಒಂದೆ ಓಟ್ ನಿಂದಾದ್ರೂ ಗೆದ್ದು ಬರ್ತೇನೆ ಎಂದ ಜಿಗಜಿಣಗಿ ಹೇಳಿದರು. ಸ್ವತಃ ಮಹಿಳೆಯರೆ ಗ್ಯಾರಂಟಿಯಿಂದ ಮತ ಹಾಕಲ್ಲ ಎಂದಿದ್ದಾರೆ. ಗ್ಯಾರಂಟಿ ಕೊಟ್ಟಾಗ ಸಿದ್ದರಾಮಯ್ಯಗೆ ಓಟು ಹಾಕಿ ಗೆಲ್ಲಿಸಿದ್ದೇವೆ.. ಮಹಿಳೆಯರು ಗ್ಯಾರಂಟಿ ನೋಡಿ ಈ ಚುನಾವಣೆಯಲ್ಲಿ ಮತ ಹಾಕೊಲ್ಲ ಎಂದಿದ್ದಾರೆ. ಮೋದಿ ಬಡವರು, ರೈತರು, ಮಹಿಳೆಯರಿಗೆ ಅವಕಾಶ ನೀಡಿದ್ದಾರೆ ಅವರಿಗೆ ಮತ ಹಾಕ್ತೀವಿ ಎಂದಿದ್ದಾರೆ ಎಂದು ಜಿಗಜಿಣಗಿ ಹೇಳಿದರು.