ವಿಜಯಪುರ: ವಿಜಯಪುರ ನಗರದ ಅಕ್ಕಮಹಾದೇವಿ ವಿವಿಯಿಂದ ಯುವತಿಯೊಬ್ಬಳು ಕಾಣೆಯಾಗಿದ್ದಾಳೆ. ಜಿಲ್ಲೆಯ ಚಡಚಣ ತಾಲೂಕಿನ ಜಿಗಜಿಣಗಿ ಗ್ರಾಮದ ಐಶ್ವರ್ಯ ನಾಮದಾರ (21) ಕಾಣೆಯಾದ ಯುವತಿ. ಅಕ್ಕನ ವಿವಿಯಲ್ಲಿ ಓದುತ್ತಿದ್ದ ಈ ಯುವತಿ, ಮೇ 18 ರಂದು ಊರಿಗೆ ಬರುವುದಾಗಿ ತಿಳಿಸಿದ್ದಳು. ಆದರೆ ಇತ್ತ ಊರಿಗೆ ಬಾರದೇ ಕಾಣೆಯಾಗಿದ್ದಾಳೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ವಿಜಯಪುರ ಗ್ರಾಮಾಂತರ ಠಾಣೆ ಪೊಲೀಸರು ತಿಳಿಸಿದ್ದಾರೆ. ಆಸ್ಪತ್ರೆಯಿಂದ ಯುವತಿ ಕಾಣೆ* ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದ ಉತ್ನಾಳ ಆಸ್ಪತ್ರೆಯಿಂದ ಯುವತಿಯೊಬ್ಬಳು ಕಾಣೆಯಾಗಿದ್ದಾಳೆ. ಆಲಮೇಲ ತಾಲೂಕಿನ ಉಚಿತನಾವದಗಿ ಗ್ರಾಮದ ಪೂಜಾ ಬಿರಾದಾರ (22) ಕಾಣೆಯಾದವಳು ಎಂದು ಪ್ರಕರಣ ದಾಖಲಿಸಿಕೊಂಡಿರುವ ಆಲಮೇಲ ಠಾಣೆ ಪೊಲೀಸರು ತಿಳಿಸಿದ್ದಾರೆ.