ವಿಜಯಪುರ : ಎಸ್ಸೆಸ್ಸೆಲ್ಸಿ ಪರೀಕ್ಷೆ ನಿರ್ವಹಣೆಯಲ್ಲಿ ಲೋಪ ಎಸಗಿದ ಆರೋಪದ ಮೇರೆಗೆ ಅಮಾನತಾಗಿದ್ದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಡಿಡಿಪಿಐ ಎನ್.ಎಚ್. ನಾಗೂರ ಅಮಾನತು ಆದೇಶಕ್ಕೆ ಕೆಎಟಿ ತಡೆಯಾಜ್ಞೆ ನೀಡಿದೆ. ಕಳೆದ ಎಸ್ಸೆಸ್ಸೆಲ್ಸಿ ಪರೀಕ್ಷೆ-1 ರ ನಿರ್ವಹಣೆಯಲ್ಲಿ ಕರ್ತವ್ಯ ಲೋಪ ಆಧಾರದ ಮೇಲೆ ನಾಗೂರ ಅವರನ್ನು ಅಮಾನತುಗೊಳಿಸಿ ಸರಕಾರ ಆದೇಶ ಹೊರಡಿಸಿತ್ತು. ಸರ್ಕಾರದ ಆದೇಶಕ್ಕೆ ಈಗ ಬೆಂಗಳೂರಿನ ಆಡಳಿತ ನ್ಯಾಯ ಮಂಡಳಿ ಪೀಠವು ಅಮಾನತು ಆದೇಶಕ್ಕೆ ಹಾಗೂ ನಾಗೂರ ಅವರಿಗೆ ಜೀವನಾಂಶ ಭತ್ಯೆ ನೀಡಲು ಮಂಗಳೂರಿನ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದ ಪ್ರವಾಚಕ ಹುದ್ದೆಗೆ ಹುದ್ದೆಯ ಲೀನ್ ಸ್ಥಳಾಂತರ ಮಾಡಲಾಗಿತ್ತು. ಇವೆರಡೂ ಆದೇಶಗಳಿಗೆ ಮುಂದಿನ ವಿಚಾರಣೆವರೆಗೂ ತಡೆಯಾಜ್ಞೆ ನೀಡಿ ಕೆಎಟಿ ಆದೇಶಿಸಿದೆ.