ವಿಜಯಪುರ: ಕರ್ತವ್ಯ ಲೋಪ ಹಿನ್ನಲೆ ಪ್ರಭಾರ ಪಿಡಿಓನ್ನು ಜಿಲ್ಲಾ ಪಂಚಾಯತ ಸಿಇಓ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಹಂಜಗಿ ಗ್ರಾಮ ಪಂಚಾಯತಿ ಪ್ರಭಾರ ಹಾಗೂ ಹಿರೇಬೇವನೂರ ಗ್ರಾಮ ಪಂಚಾಯತಿ ಪಿಡಿಓ ರವಿ ಕರ್ಜಗಿ ಅಮಾನತುಗೊಂಡವರು. ಇನ್ನು ನಮ್ಮ ಭೂಮಿ ನಮ್ಮ ತೋಟ ಯೋಜನೆಯಡಿಯಲ್ಲಿ ಕರ್ತವ್ಯ ಲೋಪ ಎಸಗಿದ್ದಾರೆ ಎಂದು ಮೇಲ್ನೋಟಕ್ಕೆ ಕಂಡುಬಂದಿದೆ. ಅದಕ್ಕಾಗಿ ರವಿನ್ನು ಅಮಾನತುಗೊಳಿಸಿ ಮುಂದಿನ ಶಿಸ್ತು ಕ್ರಮಕ್ಕೆ ಜಿಲ್ಲಾ ಪಂಚಾಯತ ಸಿಇಓ ರಿಷಿ ಆನಂದ ಆದೇಶ ಹೊರಡಿಸಿದ್ದಾರೆ.