ವಿಜಯಪುರ: ವಿಜಯಪುರ ನಗರದ ಎಸ್ಪಿ ಕಚೇರಿ ಎದುರು ಪೊಲೀಸ್ ಮುಖ್ಯ ಪೇದೆ ಪ್ರತಿಭಟನೆ ನಡೆಸಿರುವ ಘಟನೆ ನಡೆದಿದೆ. ಶಂಕ್ರಪ್ಪ ಎಸ್ ದೇಸಾಯಿ ಎಂಬ ಮುಖ್ಯ ಪೇದೆ ಪ್ರತಿಭಟನೆ ನಡೆಸಿದ್ದಾರೆ. ವರ್ಗಾವಣೆ ವಿಷಯದಲ್ಲಿ ಅನ್ಯಾಯ ಆಗಿದೆ ಎಂದು ಎಸ್ಪಿ ವಿರುದ್ಧ ಆರೋಪಿಸಿ ನ್ಯಾಯಕ್ಕಾಗಿ ಪ್ರತಿಭಟನೆ ಮಾಡಿದರು. ವಿಜಯಪುರ ಜಿಲ್ಲೆಯ ಅಲಮೇಲ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಮುಖ್ಯ ಪೇದೆಯಾಗಿ ದೇಸಾಯಿ ಸೇವೆ ಸಲ್ಲಿಸುತ್ತಿದ್ದಾರೆ. ಕಳೆದ ನಾಲ್ಕು ವರ್ಷದಿಂದ ಅಲಮೇಲ ಪೊಲೀಸ್ ಠಾಣೆಯಲ್ಲಿ ಮುಖ್ಯ ಪೇದೆ ಸೇವೆ ಸಲ್ಲಿಸುತ್ತಿದ್ದಾರೆ. ಇನ್ನು ದೇಸಾಯಿ ಪತ್ನಿ ಪುಷ್ಪಾ ಬ್ಯಾಕವಾಡ ಕೂಡ ವಿಜಯಪುರ ಐಆರ್ಬಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ವಿಜಯಪುರದಿಂದ 80 ಕಿ.ಮೀ ದೂರದಲ್ಲಿ ಸೇವೆ ಸಲ್ಲಿಸಿದ್ದೇನೆ. ಇದೀಗ ವಿಜಯಪುರ ನಗರದ ವಿಜಲನ್ಸ್ ವಿಭಾಗಕ್ಕೆ ವರ್ಗಾವಣೆ ಕೇಳಿದ್ದೆ. ಆದ್ರೆ ನನ್ನ ಬದಲು ಸದ್ಯ ವಿಜಯಪುರದ ಎಸ್ಪಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಸುಜಾತಾ ಚನಗೌಡಾ ಅವರಿಗೆ ಆ ಜಾಗೆಗೆ ನೇಮಕ ಮಾಡಿ ಎಸ್ಪಿ ಅವರು ಆದೇಶಿಸಿದ್ದಾರೆ. ಅವರ ಬದಲು ನನಗೆ ಕೊಟ್ಟಿದ್ದರೆ ನಾನು ಕುಟುಂಬದೊಂದಿಗೆ ಕೆಲ ದಿನಗಳ ವರೆಗೂ ಇದ್ದು, ಪೊಲೀಸ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದೆ. ನನಗೆ ಅನ್ಯಾಯ ಆಗಿದೆ. ಹಿರಿಯ ಅಧಿಕಾರಿಗಳು ನನಗೆ ಅನ್ಯಾಯ ಮಾಡಿದ್ದಾರೆ. ನನಗೆ ನ್ಯಾಯ ಸಿಗುವ ವರೆಗೂ ನಾನು ಧರಣಿ ಮಾಡ್ತೇನೆ ಅಂತಾ ಇದೀಗ ಧರಣಿಗೆ ಕುಳತಿದ್ದಾರೆ. ಸ್ಥಳಕ್ಕೆ ಮೇಲಧಿಕಾರಿಗಳು ಬಂದು ಹೇಳಿದರೂ ತಮ್ಮ ಪ್ರತಿಭಟನೆ ಮುಂದುವರೆಸಿದ್ದಾರೆ.