ವಿಜಯಪುರ: ಬೈಕ್ಗೆ ಅಪರಿಚಿತ ವಾಹನ ಡಿಕ್ಕಿಯಾಗಿರುವ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ವಿಜಯಪುರ ತಾಲ್ಲೂಕಿನ ಶಿವಣಗಿ ಬಳಿ ನಡೆದಿದೆ. ಆಲಮೇಲ ನಿವಾಸಿ ಪರಶುರಾಮ್ ಯಂಟಮಾನ್ ಸ್ಥಳದಲ್ಲೆ ಅಸುನೀಗಿದ್ದಾನೆ. ಬೈಕ್ ಹೊಡೆದುಕೊಂಡು ಅಪರಿಚಿತ ವಾಹನ ಸವಾರ ಎಸ್ಕೇಪ್ ಆಗಿದ್ದಾನೆ. ಅಲ್ಲದೇ, ಅಪಘಾತದಲ್ಲಿ ಡಿಕ್ಕಿ ರಭಸಕ್ಕೆ ರಸ್ತೆಯಲ್ಲಿ ಒಂದು ಕೈ ಕಟ್ ಆಗಿ ಬಿದ್ದಿದೆ. ವಿಜಯಪುರ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.