ಬೆಂಗಳೂರು:
ವಿಜಯಪುರ ಜಿಲ್ಲೆಯ ಕೊಲ್ಹಾರದಲ್ಲಿ ಮಂಗಳವಾರ ನಡೆದ ಘಟನೆಗೆ ಸಂಬಂಧಿಸಿದಂತೆ ವಿಜಯಪುರ ಜಿಲ್ಲೆಯ ಅಗ್ನಿಶಾಮಕ ತಂಡ ನಡೆಸಿರುವ ಶವ ಪತ್ತೆಕಾರ್ಯಚರಣೆ ಅಂತ್ಯವಾಗಿದ್ದು ಘಟನೆಯಲ್ಲಿ ಮೃತವಾದ ಐದು ಜನರ ಮೃತದೇಹವನ್ನು ಹೊರ ತೆಗೆಯುವ ಮೂಲಕ ಕಾರ್ಯಾಚರಣೆ ಅಂತ್ಯಗೊಳಿಸಲಾಗಿದೆ.
ಈ ಘಟನೆಯಲ್ಲಿ ಒಟ್ಟು ಐದು ಜನ ನೀರು ಪಾಲಾಗಿದರು ಅದರಲ್ಲಿ ಮಂಗಳವಾರ ದಿನ ಅಂತ್ಯದವರೆಗೆ ಮೂರು ಮೃತದೇಹಗಳನ್ನು ಹೊರ ತೆಗೆಯಲಾಗಿತ್ತು ನಂತರ ಬುಧವಾರ ಕಾರ್ಯಚರಣೆ ನಡೆಸಿದ ತಂಡ ಸಂಜೆ ಹೊತ್ತಿಗೆ ಉಳಿದ ಎರಡು ಮೃತದೇಹಗಳನ್ನು ಹೊರ ತೆಗೆಯಲಾಗಿದ್ದು ನೀರು ಪಾಲಾದ ಒಟ್ಟು 5 ಮೃತ ದೇಹಯಗಳನ್ನು ಹೊರ ತೆಗೆಯಲಾಗಿದೆ.
ಪುಂಡಲಿಕ ಯಂಕಂಚಿ, ತಯ್ಯಬ್ ಚೌಧರಿ ಹಾಗೂ ದಶರಥ ಗೌಡರ್ ಶವಗಳನ್ನು ಈಗಾಗಲೇ ಹೊರ ತೆಗೆಯಲಾಗಿದೆ. ಇನ್ನುಳಿದ ಇಬ್ಬರಿಗಾಗಿ ಶೋಧಕಾರ್ಯ ಮುಂದುವರೆದಿತ್ತು. ಇಂದು 30 ಜನ ಸಿಬ್ಬಂದಿ ಹಾಗೂ ಐದು ಬೋಟ್ಗಳ ಸಹಾಯದಿಂದ ಶೋಧಕಾರ್ಯ ಪ್ರಾರಂಭಿಸಿದ್ದು, ರಫೀಕ್ ಆಲಮೇಲ (40) ಹಾಗೂ ಮೆಹಬೂಬ್ ವಾಲಿಕಾರ್ (35) ನೀರುಪಾಲದವರು ಎನ್ನಲಾಗಿದೆ.