ಬೆಂಗಳೂರು:
ರಾಘವೇಂದ್ರ ರಾಜ್ ಕುಮಾರ್ ಅವರ ಕಿರಿಯ ಪುತ್ರ ಯುವ ರಾಜ್ ಕುಮಾರ್ ಅವರು ಪತ್ನಿ ಶ್ರೀದೇವಿ ಭೈರಪ್ಪ ಅವರಿಗೆ ವಿಚ್ಛೇದನ ಕೊಡಲು ಮುಂದಾಗಿದ್ದಾರೆ. ಯುವ ರಾಜ್ ಕುಮಾರ್ ಅವರು ಫ್ಯಾಮಿಲಿ ಕೋರ್ಟ್ನಲ್ಲಿ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದರು, ಇಂದು ವಿಚಾರಣೆ ನಡೆಸಿದ ಅರ್ಜಿ ವಿಚಾರಣೆ ನಡೆಸಿದ ಫ್ಯಾಮಿಲಿ ಕೋರ್ಟ್ ಆಗಸ್ಟ್ 23 ಕ್ಕೆ ವಿಚಾರಣೆ ಮುಂದೂಡಿದೆ
ಯುವ ರಾಜ್ ಕುಮಾರ್ ಅವರು ಪತ್ನಿಯ ವಿರುದ್ಧ ಕ್ರೌರ್ಯ, ಅಗೌರವದಿಂದ ನೋಡಿಕೊಂಡ ಗಂಭೀರ ಆರೋಪ ಮಾಡಿದ್ದಾರೆ. ಅಲ್ಲದೇ ಪತ್ನಿಯಿಂದ ನಾನು ಮಾನಸಿಕವಾಗಿ ಟಾರ್ಚರ್ ಅನುಭವಿಸಿದ್ದೇನೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದರು. ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯ ನ್ಯಾಯಾಲಯದಲ್ಲಿ ಈ ಪ್ರಕರಣದ ವಿಚಾರಣೆ ಇಂದು ಗುರುವಾರ ನಡೆದಿದ್ದು, ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ಕೋರ್ಟ್ ನಂತರ ಆಗಸ್ಟ್ 23 ಕ್ಕೆ ವಿಚಾರಣೆ ಮುಂದೂಡಿದೆ