ಬೆಂಗಳೂರು:
ಸಿಎಂ ಕುರ್ಚಿಗಾಗಿ ಅವರ ಪಕ್ಷದವರೇ ಮುಡಾ ಹಗರಣ ಹೊರಗೆ ತಂದಿದ್ದಾರೆ ಎಂದು ಮೈಸೂರಿನಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿ ಸ್ಪೋಟಕವಾದಂತ ಆರೋಪ ಮಾಡಿದ್ದಾರೆ.
ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಡ ಹಗರಣ ಇಷ್ಟೆಲ್ಲಾ ಹೊರಗಡೆ ಬರಬೇಕಾದರೆ ಸಿಎಂ ಕುರ್ಚಿ ಗಾಗಿ ಪೈಪೋಟಿ ನಡೆಯುತ್ತಿದೆಯಲ್ಲ ಅವರಿಂದ ಈ ಹಗರಣ ಹೊರಗಡೆ ಬಂದಿದೆ. ಈ ರಾಜ್ಯದಲ್ಲಿ ಹಲವಾರು ಅಭಿವೃದ್ಧಿಗಳ ಹೆಸರಿನಲ್ಲಿ ರಸ್ತೆ ಯೋಜನೆ,ರೈಲು ಯೋಜನೆಗಳು ನೀರಾವರಿ ಯೋಜನೆಗಳಿಗೆ ರೈತರಿಂದ ಭೂಮಿಯನ್ನು ಸ್ವಾಧೀನಪಡಿಸಿಕೊಂಡರಲ್ಲ ನೂರಾರು ಜನ ರೈತರು ಭೂಮಿ ಕಳೆದುಕೊಂಡು ಬೀದಿಗೆ ಬಂದಿದ್ದಾರೆ. ಇವತ್ತು ನಿಮ್ಮ ಜಮೀನಿಗೆ 62 ಕೋಟಿ ಕೇಳುತ್ತಿದ್ದೀರಲ್ಲ ರೈತರ ಭೂಮಿಯನ್ನು ಸ್ವಾಧೀನ ಪಡಿಸಿಕೊಂಡಾಗ ಅವರಿಗೆ ಎಷ್ಟು ಹಣ ನೀಡಿದ್ದೀರಿ ಎಂದು ಪ್ರಶ್ನಿಸಿದರು.
ಸಿಎಂ ಕುರ್ಚಿಗೆ ಟವೆಲ್ ಹಾಕುವ ವಿಚಾರದಲ್ಲಿ ಮೂಡ ಹಗರಣ ಹೊರಗೆ ಬಂದಿದೆ.ಅವರ ಪಕ್ಷದವರೇ ಮೂಡ ಹಗರಣವನ್ನು ಹೊರ ತಂದಿದ್ದಾರೆ ಎಂದು ಪರೋಕ್ಷವಾಗಿ ಡಿಕೆ ಶಿವಕುಮಾರ್ ವಿರುದ್ಧ ಎಚ್ ಡಿ ಕುಮಾರಸ್ವಾಮಿ ಗಂಭೀರವಾಗಿ ಆರೋಪಿಸಿದ್ದಾರೆ.