ಬೆಂಗಳೂರು
ಎಫ್ ಎಸ್ ಎಲ್ ಪರೀಕ್ಷೆಯಲ್ಲಿ ನಟ ದರ್ಶನ್ ಸೇರಿ ಇತರೆ 10 ಆರೋಪಿಗಳ ಫಿಂಗರ್ ಪ್ರಿಂಟ್ ಹೋಲಿಕೆಯಾಗಿದೆ ಎಂದು ವರದಿಯಾಗಿದೆ., ವರದಿಯಿಂದ ನಟ ದರ್ಶನ್ ಮತ್ತು ಅವರ ಗ್ಯಾಂಗನಲ್ಲಿ ಇದ್ದ 10 ಜನರಿಗೆ ಬಾರಿ ಆತಂಕ ಹುಟ್ಟಿಸಿದ್ದು,ವರದಿ ಬಂದ ಮೇಲೆ ಏನಾಗುತ್ತದೆ ಎಂಬ ಭಯದಲ್ಲಿ ಇದ್ದಾರೆ.
ಇನ್ನು ರೇಣುಕಾಸ್ವಾಮಿ ದೇಹ, ಬಟ್ಟೆ ಮೇಲೂ ಬೆರಳಚ್ಚು ಸಂಗ್ರಹಿಸಿದ್ದ ಎಫ್ ಎಸ್ ಎಲ್ ಇದೀಗ ವರದಿ ನೀಡಿದ್ದು, ರೇಣುಕಾಸ್ವಾಮಿ ಬಟ್ಟೆ ಹಾಗೂ ದೇಹದ ಮೇಲೆ ಆರೋಪಿಗಳ ಫಿಂಗರ್ ಪ್ರಿಂಟ್ ಹೋಲಿಕೆ ಕಂಡುಬಂದಿದೆ ಎನ್ನಲಾಗಿದೆ. ಪಟ್ಟಣಗೆರೆ ಶೆಡ್, ಶವ ಎಸೆದ ಜಾತ, ಶವ ಸಾಗಿಸಿದ ವಾಹನ, ಶವ ಇಟ್ಟಿದ್ದ ಸೆಕ್ಯೂರಿಟಿ ಗಾರ್ಡ್ ಕೊಠಡಿಯಲ್ಲಿ ಸಿಕ್ಕ ಬೆರಳಚ್ಚಿಗೂ ಆರೋಪಿಗಳ ಬೆರಳಚ್ಚು ಒಂದೇ ಆಗಿದೆ ಎನ್ನಲಾಗಿದೆ.