ತಮ್ಮ ಅದ್ಭುತ ಮಾತುಗಾರಿಕೆಯಿಂದ ಹೆಸರು ಮಾಡಿದ್ದ ಖ್ಯಾತ ನಿರೂಪಕಿ, ನಟಿ ಅಪರ್ಣಾ ಅವರ ಅಕಾಲಿಕ ನಿಧನ ನಿಜಕ್ಕೂ ಬೇಸರ ತರಿಸಿದೆ. ಅಪರ್ಣಾ ಅವರಾಡುತ್ತಿದ್ದ ಶುದ್ಧ ಕನ್ನಡ ಭಾಷೆಯನ್ನು ಕೇಳುವುದೇ ಅನನ್ಯ ಅನುಭವ. ಅವರ ನಿಧನ ಕನ್ನಡಿಗರಿಗೆ ಯಾವತ್ತಿಗೂ ತುಂಬಲಾರದ ನಷ್ಟ….
ಅಪರ್ಣಾ ಅವರ ಆತ್ಮಕ್ಕೆ ಪರಮಾತ್ಮನು ಶಾಂತಿ ಕರುಣಿಸಲಿ, ಅವರ ಕುಟುಂಬಕ್ಕೆ ಈ ಅಗಲಿಕೆಯ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸೋಣ….