K1N ಡೆಸ್ಕ: ಸಂಚುರಿ ಸ್ಟಾರ್ ಶಿವಣ್ಣನಿಗೆ ಇವತ್ತು 60 ವರ್ಷಗಳ ಸಂಭ್ರಮ. ಇವತ್ತಿನ ಹೊಸ ತಲೆಮಾರಿನ ಹುಡುಗರೂ ನಾಚುವಂತೆ ದೇಹಸೌಂದರ್ಯ ಕಾಪಾಡಿಕೊಂಡು ಬಂದಿರುವ ಶಿವಣ್ಣನ ಹುಟ್ಟು ಹಬ್ಬಕ್ಕೆ ಸಿನಿ ರಂಗದವರು ಸೇರಿದಂತೆ ಅಸಂಖ್ಯಾತ ಅಭಿಮಾನಿಗಳು ಶುಭ ಕೋರುತ್ತಿದ್ದಾರೆ.
ಶಿವಣ್ಣ ಹುಟ್ಟು ಹಬ್ಬಕ್ಕೆ ಫಾರ್ಟಿ ಫೈವ್ ಅನ್ನೋ ಚಿತ್ರದ ಪೋಸ್ಟರ್ ರಿಲೀಸ್ ಮಾಡಲಾಗಿದೆ. ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಮೊದಲ ಬಾರಿಗೆ ನಿರ್ದೇಶನಕ್ಕೆ ಕೈ ಹಾಕಿದ್ದಾರೆ. ಇನ್ನು ಯಾವೆಲ್ಲ ಸಿನಿಮಾಗಳು ಬರುತ್ತವೆ.
ಯಾವ ಸಿನಿಮಾಗಳ ಪೋಸ್ಟರ್, ಟೀಸರ್ ರಿಲೀಸ್ ಆಗುತ್ತವೆ ಅನ್ನೋ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ.