ಬೆಂಗಳೂರು:
ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮರ್ಯಾದೆ ಇದ್ದರೆ ಕೂಡಲೇ ತಮ ಸ್ಥಾನಕ್ಕೆ ರಾಜೀನಾಮೆ ಕೋಡಬೇಕು ಎಂದು ವಿರೋಧ ಪಕ್ಷದ ನಾಯಕ ಆರ್ ಅಶೋಕ ಆಗ್ರಹಿಸಿದ್ದಾರೆ.
ರಾಜ್ಯದ ಇತಿಹಾಸದಲ್ಲಿ 187 ಕೋಟಿ ದಲಿತರ ಹಣ ಲೂಟಿಯಾಗಿದೆ. ದಲಿತರ ಪರ ಹೇಳುತ್ತಾ ಮತ ಪಡೆದ ಕಾಂಗ್ರೆಸ್ ಅವರ ಹಣವನ್ನೇ ಲೂಟಿ ಹೊಡೆದಿದೆಸಿಎಂ ತಮನ್ನು ರಕ್ಷಣೆ ಮಾಡಿಕೊಳ್ಳಲು ಆಗಲು ನಿವೃತ್ತ ನ್ಯಾಯಮೂರ್ತಿಗಳ ಮುಖಾಂತರ ನ್ಯಾಯಾಂಗ ತನಿಖೆ ಮಾಡಿಸುತ್ತಿದ್ದಾರೆ. ಇವರ ಮೇಲೆ ಆರೋಪ ಬಂದರೆ ನ್ಯಾಯಂಗ ತನಿಖೆ. ಯಡಿಯೂರಪ್ಪ ಮೇಲಾದರೆ ಎಸ್ಐಟಿ ತನಿಖೆಯೇ? ಎಂದು ವ್ಯಂಗ್ಯವಾಡಿದರು. 187 ಕೋಟಿ ಲೂಟಿ ಮಾಡಿರುವ ಕಾಂಗ್ರೆಸ್ ವಿರುದ್ಧ ನಾವು ಪ್ರತಿಭಟನೆ ಮಾಡುತ್ತಿದ್ದೇವೆ. ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲು ಸದನದ ಒಳಗೆ ಹೋರಾಟ ಮಾಡುತ್ತೇವೆ ಎಂದು ಹೇಳಿದರು.