ವಿಜಯಪುರ: ಸಾಲಬಾಧೆಯಿಂದ ರೈತನೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ಪಟ್ಟಣದ ಬಿಬಿ ಇಂಗಳಗಿ ಗ್ರಾಮದಲ್ಲಿ ನಡೆದಿದೆ.
ಬಸಪ್ಪ ಈರಪ್ಪ ನಾಯ್ಕೋಡಿ (55) ಮೃತ ದುರ್ದೈವಿ. ತನ್ನ ಸ್ವಂತ ಮೂರುವರೆ ಎಕರೆ ಜಮೀನಿನಲ್ಲಿ ಕೃಷಿ ಕಾಯಕ ಮಾಡಿಕೊಂಡಿದ್ದ. ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದ ಬೆಳೆ ಹಾನಿಯಾಗಿ ಕೊಂಡಗೂಳಿ ಕೆಜಿಬಿ ಬ್ಯಾಂಕಿನಲ್ಲಿ 32 ಸಾವಿರ ರೂ, ಪಿಕೆಪಿಎಸ್ ಬಿ ಬಿ ಇಂಗಳಗಿ 1 ಲಕ್ಷ ರೂ. ಸಾಲ, ಖಾಸಗಿಯಾಗಿ 3 ಲಕ್ಷ ರೂ. ಸಾಲ ಮಾಡಿಕೊಂಡಿದ್ದರು. ಈ ಕುರಿತು ಕಲಕೇರಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.