ಸವದತ್ತಿ ತಾಲೂಕಿನ ಮುನವಳ್ಳಿಯ ನವಿಲುತಿರ್ಥದ ಸೂಪರಿಂಟೆಂಡಿಂಗ್ ಇಂಜಿನಿಯರ್ ಕಚೇರಿಯಲ್ಲಿ ನನ್ನ ಅಧ್ಯಕ್ಷತೆಯಲ್ಲಿ ಮಲಪ್ರಭಾ ಯೋಜನೆಯ ನೀರಾವರಿ ಸಲಹಾ ಸಮಿತಿಯ ಸಭೆ ನಡೆಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಪ್ರವಾಹ ವಿಷಯದಲ್ಲಿ ಅಧಿಕಾರಿಗಳು ಮರೆತು ಇರಬಾರದು ಎಂದು ಖಡಕ ಸೂಚನೆ ನೀಡಿದರು.
ಈ ವೇಳೆ ಮಾತನಾಡಿದ ಅವರು ನಮ್ಮ ಸರಕಾರ ಯಾವತ್ತೂ ರೈತರ ಪರವಾಗಿದ್ದು ರೈತರ ಹಿತಾಸಕ್ತಿ ನಮಗೆ ಮುಖ್ಯ. ಅದಕ್ಕೆ ತಕ್ಕಂತೆ ಪ್ರತಿ ತಿಂಗಳ ಯೋಜನೆ ರೂಪಿಸಿ, ಕಾಲುವೆಗಳ ನಿರ್ವಹಣೆಗೆ ಪ್ರಸ್ತಾವನೆ ಸಲ್ಲಿಸಿ, ರೈತರ ಪರವಾಗಿಯೇ ಪ್ರಸ್ತಾವನೆ ರೆಡಿಯಾಗಬೇಕೆನ್ನುವ ವಿಷಯಗಳ ಕುರಿತು ಅಧಿಕಾರಿಗಳಿಗೆ ಸೂಚಿಸಲಾಯಿತು. ಇದೇ ಸಮಯದಲ್ಲಿ ನದಿಯ ಒಳಹರಿವಿನ ಪ್ರಮಾಣ ಏರಿಕೆಯಾಗಿದ್ದು, ನೀರಿನ ಪ್ರಮಾಣ ನೋಡಿಕೊಂಡು ನೀರು ಹೊರಬಿಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಯಿತು.
ಸಭೆಯಲ್ಲಿ ಮಾಜಿ ಸಚಿವರು ಹಾಗೂ ನರಗುಂದ ಶಾಸಕರೂ ಆಗಿರುವ ಸಿ.ಸಿ.ಪಾಟೀಲ್, ನವಲಗುಂದ ಶಾಸಕರಾದ ಎನ್.ಎಚ್.ಕೋನರೆಡ್ಡಿ, ಸವದತ್ತಿ ಶಾಸಕರಾದ ವಿಶ್ವಾಸ ವೈದ್ಯ, ನೀರಾವರಿ ಸಲಹಾ ಸಮಿತಿಯ ಅಧ್ಯಕ್ಷರು, ಕಾರ್ಯದರ್ಶಿಗಳು, ಸಲಹಾ ಸಮಿತಿಯ ಸದಸ್ಯರು, ರೈತರು, ಅಧಿಕಾರಿಗಳು ಉಪಸ್ಥಿತರಿದ್ದರು.