ಬೆಂಗಳೂರು:
ಪ್ರತಿ ವರ್ಷದಂತೆ ಈ ವರ್ಷ ಕೂಡಾ ಬೆಂಗಳೂರು ನಗರದ ಲಾಲಬಾಗ್ ನಲ್ಲಿ ಫಲ ಪುಷ್ವ ಪ್ರದರ್ಶನ ಏರ್ಪಡಿಸಿದ್ದು,ಸ್ವಾತಂತ್ರ್ಯ ದಿನದಂದು ಮತ್ತು ನಂತರ ಎರಡು ದಿಗಳ ಕಾಲ ಇಲ್ಲಿ ನೋಡುಗರ ಸಂಖ್ಯೆ ಹೆಚ್ಚಾಗುವ ಮುನ್ನಸುಚ್ಚನೆಯಿಂದ ನಮ್ಮ ಮೆಟ್ರೋ ಈ ವರ್ಷ ಬಿಗ್ ಆಫರ್ ನೀಡಿದೆ. ಈ ಕುರಿತಂತೆ ಬಿಎಂಆರ್ ಸಿಎಲ್ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಲಾಲ್ಬಾಗ್ ನಲ್ಲಿ ಆಯೋಜಿಸಲಾಗಿರುವ ತೋಟಗಾರಿಕಾ ಫಲಪುಷ್ಪ ಪ್ರದರ್ಶನದ ಹಿನ್ನಲೆಯಲ್ಲಿ, ನಮ್ಮ ಮೆಟ್ರೋ ದಿನಾಂಕ 15, 17 ಮತ್ತು 18ನೇ ಆಗಸ್ಟ್, 2024 ರಂದು ಲಾಲ್ಬಾಗ್ ಮೆಟ್ರೋ ನಿಲ್ದಾಣದಲ್ಲಿ ಪ್ರಯಾಣಿಕರ ತ್ವರಿತ ಪ್ರಯಾಣಕ್ಕಾಗಿ ಬೆಳಿಗ್ಗೆ 10.00 ರಿಂದ ರಾತ್ರಿ 08.00 ರವರೆಗೆ ಟೋಕನ್ಗಳ ಬದಲಿಗೆ ರಿಟರ್ನ್ ಜರ್ನಿ ಪೇಪರ್ ಟಿಕೆಟ್ಗಳನ್ನು ರೂ 30/- ನಗದು ಮುಖಾಂತರ ವಿತರಿಸಲಾಗುತ್ತದೆ ಎಂದಿದೆ.
ಸಾರ್ವಜನಿಕರು ಟೋಕನ್, ಕಾರ್ಡ್, ಕ್ಯೂಆರ್ ಟಿಕೆಟ್ಗಳ ಮೂಲಕ ಲಾಲ್ಬಾಗ್ ನಿಲ್ದಾಣಕ್ಕೆ ಪ್ರಯಾಣಿಸಬಹುದು ಹಾಗೂ ಲಾಲ್ಬಾಗ್ ಮೆಟ್ರೋ ನಿಲ್ದಾಣದಿಂದ ಹಿಂತಿರುಗಲು ಟೋಕನ್ ಗಳ ಬದಲಿಗೆ ಪೇಪರ್ ಟಿಕೆಟ್, ಕಾರ್ಡ್, ಮತ್ತು ಕ್ಯೂಆರ್ ಟಿಕೆಟ್ ಮೂಲಕ ಮಾತ್ರ ಪ್ರಯಾಣಿಸಬಹುದು. ಮೇಲಿನ ದಿನಾಂಕಗಳಲ್ಲಿ ಮತ್ತು ಅವಧಿಯಲ್ಲಿ ಲಾಲ್ಬಾಗ್ ಮೆಟ್ರೋ ನಿಲ್ದಾಣದಲ್ಲಿ ಟೋಕನ್ಗಳನ್ನು ನೀಡಲಾಗುವುದಿಲ್ಲ ಎಂದು ಹೇಳಿದೆ. ರಿಟರ್ನ್ ಜರ್ನಿ ಪೇಪರ್ ಟಿಕೆಟ್ಗಳು ಖರೀದಿಸಿದ ದಿನದಂದು ಲಾಲ್ಬಾಗ್ ಮೆಟ್ರೋ ನಿಲ್ದಾಣದಿಂದ ಯಾವುದೇ ಮೆಟ್ರೋ ನಿಲ್ದಾಣಕ್ಕೆ ಪ್ರಯಾಣಿಸಲು ಮಾನ್ಯವಾಗಿರುತ್ತದೆ ಎಂದು ತಿಳಿಸಿದೆ.