ಬೆಂಗಳೂರು:
ಸಿಲಿಕಾನ ಸಿಟಿ ಎಂದೆ ಪ್ರಸಿದ್ದ ಪಡೆದಿರುವ ಬೆಂಗಳೂರು ದೇಶದಲ್ಲಿರುವ ಎಲ್ಲಾ ಮಹಾನಗರಗಳನ್ನು ಬೆಳವಣಿಗೆಯಲ್ಲಿ ಹಿಂದಿಕ್ಕಿರುವ ಈ ನಗರದಲ್ಲಿ ಮಳೆ ಬಂದರೆ ಸಾಕು ಒಂದಲ್ಲ ಒಂದು ಸಮಸ್ಯೆಗಳು ಆಗುತ್ತವೆ, ಅಷ್ಟೇ ಅಲ್ಲಾ ಈ ಸಮಸ್ಯೆಗಳು ಪ್ರತಿವರ್ಷಕೂಡಾ ಆಗುತ್ತಿವೆ ನಿನ್ನೆ ರಾತ್ರಿ ಅಷ್ಟೇ ನಗರದಲ್ಲಿ ಬಾರಿ ಪ್ರಮಾಣದಲ್ಲಿ ಮಳೆ ಸುರಿದ ಹಿನ್ನೆಲೆಯಲ್ಲಿ ನಗರದ ಹಲವು ಕಡೆ ರಸ್ತೆಗಳ ಮೇಲೆ,ಸೇತುವೆ ಕಳಭಾಗದಲ್ಲಿ, ನಗರದ ಕೆಲವು ಏರಿಯಾದ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಠಿ ಮಾಡಿದೆ. ರಾಜರಾಜೇಶ್ವರಿ ನಗರ, ಎಚ್ ಎಸ್ ಆರ್ ಲೇಔಟ್, ಚಾಮರಾಜಪೇಟೆ, ಎಚ್ ಎಎಲ್, ಮೆಜೆಸ್ಟಿಕ್ ಮುಂತಾದ ಕಡೆಗಳಲ್ಲಿ ವರುಣನ ಸಿಂಚನವಾಗಿದೆ. ಬೆಳಗಿನ ಜಾವ ಸುಮಾರು 4.30 ಗಂಟೆಯಿಂದಲೇ ಶುರುವಾದ ಮಳೆ, 6:30ವರೆಗೆ ಸಾಧಾರಣವಾಗಿ ಸುರಿದಿದೆ. ಬೆಳಗಿನ ಜಾವ ಸುರಿದ ಅಪಾರ ಪ್ರಮಾಣದ ಮಳೆಯಿಂದಾಗಿ, ರಾಜಧಾನಿಯ ಹಲವಾರು ಪ್ರಾಂತ್ಯಗಳ ಜನಜೀವನ ಅಸ್ತವ್ಯಸ್ತವಾಗಿತ್ತು. ಮೆಜೆಸ್ಟಿಕ್, ಶಾಂತಿನಗರ, ಯಶವಂತಪುರ ಮುಂತಾದ ಕಡೆಗಳಲ್ಲಿ ಸುರಿದ ಮಳೆ ವಿವಿಧ ಕಡೆಯಿಂದ ಬರುಉವ ಜನತರಿಗೆ ಬಾರಿ ಪ್ರಮಾಣದಲ್ಲಿ ತೊಂದರೆ ನೀಡಿದೆ. ಆ. 12ರ ಬೆಳಗಿನ ಜಾವ ಸುರಿದ ಮಳೆಯಿಂದಾಗಿ ಬೆಂಗಳೂರಿನ ಹಲವಾರು ರಸ್ತೆಗಳಲ್ಲಿ ನೀರು ನಿಂತಿದೆ.
ಬೆಂಗಳೂರು ಟ್ರಾಫಿಕ್ ಪೊಲೀಸ್ ಇಲಾಖೆಯ ಅಧಿಕೃತ ಟ್ವಿಟರ್ ಹ್ಯಾಂಡಲ್ ನಲ್ಲಿ ಬೆಂಗಳೂರಿನ ಹೆಬ್ಬಾಳ ಫ್ಲೈಓವರ್ ನ ಅಪ್ಪರ್ ರ್ಯಾಂಪ್ ಮೇಲೆ ಹಾಗೂ ಡೌನ್ ನಲ್ಲಿ ನೀರು ನಿಂತಿದ್ದು, ಅಲ್ಲಿ ವಾಹನ ಚಾಲನೆ ತುಸು ಕಷ್ಟವಾಗಿದೆ ಎಂದು ಹೇಳಿದೆ. ಮೊಣಕಾಲುದ್ದ ಇರುವ ನೀರಿನಲ್ಲಿ ವಾಹನಗಳು ಹೋಗುತ್ತಿರುವ ವಿಡಿಯೋ ತುಣುಕೊಂದನ್ನು ಈ ಟ್ವಿಟರ್ ಖಾತೆಯಲ್ಲಿ ಅಪ್ಲೋಡ್ ಮಾಡಲಾಗಿದೆ.
ಈ ಎಲ್ಲಾ ಸುದ್ದಿ ತಿಳಿದ ಡಿಸಿಎಂ ಡಿಕೆ ಶಿವಕುಮಾರ ಬೆಳಗ್ಗೆ ಹಲವಾರು ಭಾಗಳಲ್ಲಿ ಮಳೆಯಿಂದ ಆದ ಅವಾಂತರಗಳ ಪ್ರದೇಶಗಳಿಗೆ ಬೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ, ಈವೇಳೆ ಜೋತೆಗೆ ಇದ್ದ ಅಧಿಕಾರಿಗಳಿಗೆ ಮಳೆ ಬಂದರೆ ಜನರಿಗೆ ಯಾವುದೇ ತೊಂದರೆ ಆಗಬಶಾರದು, ಅಧಿಕಾರಿಗಳು ಸದಾ ಜನರ ಸೇವೆ ಸಿಗಬೇಕು,ಮಳೆ ಬರುವ ಮುನ್ನಾ ಮಳೆಯಿಂದ ಜಲಾವೃತವಾಗುವ ಕೆಲವು ಪ್ರದೇಶಗಳ ಬಗ್ಗೆ ಮುನ್ನೆಚ್ಚರಿಕೆ ಇರಬೇಕು, ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.