ಬೆಂಗಳೂರು:
ಇತ್ತಿಚ್ಚಿಗೆ ಲೋಕ ಸಭಾ ಚುನಾವಣೆಯಲ್ಲಿ ಬಿಜೆಪಿ ಜೋತೆಗೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್ ನಾಯಕರಿಗೆ ಈಗ ಚನ್ನಪಟ್ಟಣ ಉಪಚುನಾವಣೆ ಬಾರಿ ತೆಲೆ ನೋವು ತಂದಿದ್ದು ಮಾಜಿ ಸಚಿವ ಸಿ ಪಿ ಯೋಗೇಶ್ವರ ಅವರ ಸ್ಪರ್ಧೆ ವಿಚಾರ ಬಾರಿ ಶಾಕ್ ನೀಡಿದೆ.
ಇತ್ತಿಚ್ಚಿಗಷ್ಟೆ ಜೆಡಿಎಸ್ ನಾಯಕ ಕೇಂದ್ರ ಸಚಿವರಾದ ಎಚ್ ಡಿ ಕುಮಾರಾಸ್ವಾಮಿ ಅವರ ಲೋಕ ಸಭಾ ಚುನಾಲವಣೆಯಲ್ಲಿ ಸ್ಪರ್ಧೆ ಮಾಡಿ ಗೆಲವು ಸಾಧಿಸಿರುವ ಹಿನ್ನೆಲೆಯಲ್ಲಿ ಈ ವಿಧಾನ ಸಭಾ ಕ್ಷೇತ್ರದ ಸ್ಥಾನ ತೆರವುಯಾಗಿದ್ದು, ಈ ಕ್ಷೇತ್ರದ ಮೇಲೆ ಕಣ್ಣಿಟ್ಟಿರುವ ಬಿಜೆಪಿ ನಾಯಕ ಮಾಜಿ ಸಚಿವ ಸಿಪಿ ಯೋಗೇಶ್ವರ ಅವರು ತಮ್ಮ ನಾಯಕರಿಗೆ ಒತ್ತಡ ಹಾಕುತ್ತಿದ್ದು, ಜೆಡಿಎಸ್ ನಾಯಕರಿಗೆ ಬಾರಿ ತೆಲೆ ನೋವು ತಂದಿದೆ, ಆದರೆ ಏನೆ ಆದರೂ ತವರು ಕ್ಷೇತ್ರ ಬಿಟ್ಟು ಕೊಡಲು ಹಿಂದೆಟ್ಟು ಹಾಕುತ್ತಿರುವ ಜೆಡಿಎಸ್ ನಾಯಕರು ಯುವ ನಾಯಕ ನಿಖಿಲ ಕುಮಾರಾಸ್ವಾಮಿಗೆ ಜೆಡಿಎಸ್ ನಿಂದ ಸ್ಪರ್ಧೆ ಮಾಡಿಸಿ ಬಿಜೆಪಿ ಬೆಂಬಲ ಪಡೆದುಕೊಂಡು ಗೆಲವು ಸಾಧಿಸಬಹುದು ಎಂದು ಒಂದು ಕಡೆ ಲೆಕ್ಕಾಚಾರ ಹಾಕಿದರೆ ಮೈತ್ರಿ ನಾಯಕರಿ ಈಗ ಅದೆ ಪಕ್ಷದ ಯೊಗೇಶ್ವರ ಸ್ಪರ್ಧೆ ತೆಡೆಯುವುದು ಕಷ್ಟವಾಗುತ್ತಿದೆ, ನಿನ್ನೆ ಅಷ್ಟೇ ಸಮನ ಮನಷ್ಕರ್ ಸಭೆ ಕರೆಯಲು ಮುಂದಾಗಿರುವ ಯೋಗೇಶ್ವರ ಅವರಿಗೆ ಬಿಜೆಪಿ ನಾಯಕರು ದೆಹಲಿಗೆ ಬರಲು ತಿಳಿಸಿದ್ದಾರೆ, ಮುಖಂಡರ ಆದೇಶದಂತೆ ದೆಹಲಿಗೆ ಹೋಗಿರುವ ಮಾಜಿ ಸಚಿವ ಯೋಗೇಶ್ವರ ಹೈಕಮಾಂಡ ಬೇಟಿಗೂ ಮುನ್ನವೇ ಶಾಕ್ ನೀಡಿದ್ದಾರೆ, ಅದು ಏನೆಂದರೆ ನಾನು ಚನ್ನಪಟ್ಟಣದ ಮತಕ್ಷೇತ್ರಕ್ಕೆ ಬಿಜೆಪಿ ಟೀಕೆಟ್ ಪಡೆದುಕೊಂಡು ಸ್ಪರ್ಧೆ ಮಾಡುತ್ತೆನೆ, ನನಗೆ ನಮ್ಮ ನಾಯಕರು ಟೀಕೇಟ್ ನೀಡುತ್ತಾರೆ ಎಂಬ ನಂಬಿಕೆ ಇದೆ ಆದರೆ ಒಂದು ವೇಳೆ ಟಿಕೇಟ್ ಸಿಗದೆ ಹೋದರೂ ಕೂಡಾ ನಾನು ಪಕ್ಷೇತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತೆನೆ ಎಂದು ಹೇಳಿಕೆ ಕೊಟ್ಟಿರುವ ಯೋಗೇಶ್ವರ ಮೈತ್ರಿ ನಾಯಕರಿಗೆ ಬಾರಿ ಶಾಕ್ ಕೊಟ್ಟಿದ್ದಾರೆ, ಮುಂದೆನಾಗುತ್ತದೆ ಕಾದು ನೋಡಬೇಕು.