ಬೆಂಗಳೂರು:
ರಾಜ್ಯ ಕಾಂಗ್ರೇಸ್ ಪಕ್ಷ ಚುನಾವಣೆಯ ಮುಂಚಿತವಾಗಿ ಹಲವಾರು ಭರವಸೆಗಳನ್ನು ನೀಡಿತ್ತು ಅದರಲ್ಲಿ ಪ್ರಮುಖವಾಗಿ 5 ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿದ್ದು ಈಗ ಅಧಿಕಾರಕ್ಕೆ ಬಂದ ಮೇಲೆ ಜಾರಿಗೂ ಕೂಡಾ ತಂದಿದೆ ಅದರಲ್ಲಿ ಪ್ರಮುಖವಾದ ಗೃಹಲಕ್ಷ್ಮೀ ಯೋಜನೆ ಕೂಡಾ ಒಂದು ಇದರಲ್ಲಿ ಕುಟುಂಬದ ಮುಖ್ಯಸ್ಥೆಯಗೆ ತಿಂಗಳಿಗೆ 2000 ಹಣ ಕೊಡುವ ಯೋಜನೆ ಇದು ಮಹಿಳಿಯರಿಗೆ ಮಾತ್ರ ಸೀಮಿತವಾದ ಯೋಜನೆ ಯಾಗಿದ್ದು ಈಗ ಆ ಯೋಜನೆ ಮಂಗಳಮುಖಿಯರಿಗೂ ವಿಸ್ತರಣೆ ಮಾಡಿದ ಸರ್ಕಾರ ಅವರಿಗೂ ನೋಂದಣಿ ಮಾಡಿಕೊಳ್ಳಲು ಅವಕಾಶ ಮಾಡಿಕೊಟ್ಟಿದೆ, ನಿನ್ನೆ ಅಷ್ಟೇ ಗದಗ ಜಿಲ್ಲಾ ರೋಣ ತಾಲೂಕಾ ಪಂಚಾಯತ್ ಸಭಾಂಗಣದಲ್ಲಿ ಸಾಂಕೇತಿಕವಾಗಿ ಕೆಲವು ಮಂಗಳಮುಖಿಯರಿಗೆ ಗೃಹಲಕ್ಷ್ಮಿ ಯೋಜನೆಯ ನೋಂದಣಿ ಪತ್ರಗಳನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹಸ್ತಾಂತರಿಸಿದ್ದರು.
ಈ ವೇಳೆ ಸಭೆಯಲ್ಲಿ ತಹಸಿಲ್ದಾರ ನಾಗರಾಜ ಕುಲಕರ್ಣಿ, ಜಿಲ್ಲೆಯ ಉಪ ನಿರ್ದೇಶಕರಾದ ಪರಶುರಾಮ ಶೆಟ್ಟೆನ್ನವರ, ಜಿಲ್ಲೆಯ ಎಲ್ಲ ತಾಲೂಕುಗಳ ಸಿಡಿಪಿಓ, ಸಂಗನಗೌಡ ಪಾಟೀಲ ಹಾಗೂ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.