ಬೆಂಗಳೂರು ಅಂದರೆ ಸಮುದ್ರ ಇದ್ದಹಾಗೆ ಇಲ್ಲಿ ತಮ್ಮ ಜೀವನ ಕಟ್ಟಿಕೊಳ್ಳಲು ಹಲವಾರು ರಾಜ್ಯದಿಂದ ಮತ್ತು ಹಲವಾರು ಜಿಲ್ಲೆಯಿಂದ ಸಾವಿರಾರು ಜನರು ಬರುತ್ತಾರೆ, ಅಲ್ಲದೆ ಜೀವನ ನಡೆಸಲು ತಮಗೆ ದೊರೆಯುವ ಕೆಲಸಗಳಿಗೆ ಹೊಂದಾಣಿಕೆ ಮಾಡಿಕೊಂಡು ಯುವಕರು,ಯುವತಿಯರು ಜೀವನ ಸಾಧಿಸುತ್ತಾರೆ, ಅದೆ ಕೆಲಸ ಮಾಡಲು ಹೋಗುತ್ತಿರುವ ಕಲ್ಕತ್ತಾ ಮೂಲದ ಯುವತಿ ಓರ್ವಳ ಮೇಲೆ ನಿನ್ನೆ ಅತ್ಯಾಚಾರ ನಡೆದಿದೆ ಎನ್ನಲಾಗಿದೆ.
ಮಧ್ಯರಾತ್ರಿ ನಗರದ ಕೋರಮಂಗಲದ ಪಬ್ನಿಂದ ಪಾನಮತ್ತರಾಗಿ ಹೊರ ಬಂದಿದ್ದ ಯುವತಿ ತನ್ನ ದ್ವಿಚಕ್ರ ವಾಹನ ಓಡಿಸಿಕೊಂಡು ಮನೆಗೆ ತೆರಳುತ್ತಿದ್ದರು. ಈ ವೇಳೆ ವಾಹನ ಅಪಘಾತವಾಗಿದ್ದು ಯುವತಿ ವಾಹನ ಬಿಟ್ಟು ಆಟೋದಲ್ಲಿ ಪ್ರಯಾಣ ಬೆಳೆಸಿದ್ದರು. ಇದೇ ವೇಳೆ ಆಟೋ ಚಾಲಕ, ಯುವತಿಯ ಸ್ಥಿತಿ ಕಂಡು ದುರ್ಬಳಕೆ ಮಾಡಿಕೊಂಡಿದ್ದಾನೆ. ಆಟೋ ಹತ್ತಿದ್ದ ಯುವತಿಯನ್ನು ಬೊಮ್ಮನಹಳ್ಳಿ ಸಮೀಪದ ಗೋದಾಮು ಬಳಿ ಕರೆದುಕೊಂಡು ಹೋಗಿ ರೇಪ್ ಮಾಡಲಾಗಿದೆ ಎಂಬ ಮಾಹಿತಿ ಸಿಕ್ಕಿದೆ. ಸದ್ಯ ಯುವತಿ ಹೆಬ್ಬಗೋಡಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.