ಬೆಂಗಳೂರು:
ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಬಂಧನಕ್ಕೊಳಗಾಗಿರುವ ನಟ ದರ್ಶನ್ ಹಾಗೂ ಅವರ ಸ್ನೇಹಿತರ ಬಂಧನಾವಧಿಯಲ್ಲಿ ಸೆ. 7ರವರೆಗೆ ವಿಸ್ತರಿಸಿ ಬೆಂಗಳೂರಿನ ಸ್ಥಳೀಯ ನ್ಯಾಯಾಲಯ ಆದೇಶ ಹೊರಡಿಸಿದೆ. ತನಿಖೆ ಇನ್ನೂ ಮುಗಿಯದಿರುವ ಹಿನ್ನೆಲೆಯಲ್ಲಿ ಅವರ ಬಂಧನವಾವಧಿಯನ್ನು ವಿಸ್ತರಿಸಬೇಕೆಂದು ಪೊಲೀಸರು ಸಲ್ಲಿಸಿದ ಮನವಿಯನ್ನು ಪುರಸ್ಕರಿಸಿದ ನ್ಯಾಯಾಲಯ ಬಂಧನಾವಧಿಯನ್ನು ವಿಸ್ತರಣೆ ಮಾಡಿದೆ.
ಎರಡು ದಿನದಿಂದ ಚರ್ಚೆಗೆ ಗ್ರಾಸ್ ವಾಗಿರುವ ದರ್ಶನ ಜೈಲಿನಲ್ಲಿ ಬಿಂದಾಸ್ ಜೀವನ ನಡೆಸುತ್ತಿದ್ದಾನೆ ಅವನಿಗೆ ಆರೋಪಿ ತರಹ ಪೋಲಿಸರು ನೋಡಿಕೊಳ್ಳುತ್ತಿಲ್ಲ, ಹೀಗಾಗಿ ದರ್ಶನ ರೌಡಿಗಳ ಜೋತೆಗೆ ಸೇರಿ ಸಾಕ್ಷಿ ನಾಶ ಮಾಡಬಹುದು ಎಂದು ರೇಣುಕಾಸ್ವಾಮಿ ಕುಟುಂಬದವರು ಮತ್ತು ಸಾಮಾಜಿಕ ಹೋರಾಟಗಾರರು ಆರೋಪ ಮಾಡಿದರು,ಹೀಗಾಗಿ ಇಂದು ನಸುಕಿನ ಜಾವ ದಾಸನಿಗೆ ಐತಿಹಾಸಿಕ ಬಳ್ಳಾರಿ ಬಂದಿಖಾನಿಗೆ ಶಿಪ್ಟ್ ಮಾಡಲುನಪೋಲಿಸರು ಬಿಗಿ ಭದ್ರತೆಯಲ್ಲಿ ಕರೆದುಕೊಂಡು ಹೋಗಿದು ಬೆಳಗ್ಗೆ 9 ಗಂಟೆಗೆ ಬಳ್ಳಾರಿ ಜೈಲಿಗೆ ದಾಸ ಸೇರಲಿದ್ದಾರೆ.
ಜೋತೆಗೆ ಈ ಕೇಸ್ ನಲ್ಲಿ ಇರುವ 10 ಜನರಿಗೆ ಕೂಡಾ ಬೇರೆಬೇರೆ ಕಡೆ ಸ್ಥಾಳಾಂತರ ಮಾಡಿದ ಪೋಲಿಸರು, ಬೆಂಗಳೂರಿನ ಪರಪನಾಗ್ರದಲ್ಲಿ ಮುದ್ದೆ ಮಜುರಿಯುತ್ತಿರುವ ಈ ಗ್ಯಾಂಗಿಗೆ ಬಾರಿ ಶಾಕ್ ನೀಡಿದ್ದಾರೆ.