ವಿಜಯಪುರ: ಕಳೆದ 24 ಗಂಟೆಯಲ್ಲಿ ಸಾಕಷ್ಟು ಹಸಿ ಮಳೆ ಆಗ್ತಿದೆ ಎಂದು ವಿಜಯಪುರ ನಗರದಲ್ಲಿ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.
ಇನ್ನು ಎರಡ್ಮೂರು ದಿನ ಹವಾಮಾನ ವರದಿ ಪ್ರಕಾರ ಮಳೆಯಿದೆ. ಎಲ್ಲಾ ಕಡೆ ಅತಿವೃಷ್ಟಿ ಆಗ್ತಿದೆ. ಈಗಾಗಲೇ ಕಂದಾಯ ಸಚಿವರು ಎಲ್ಲಾರೂ ಪ್ರವಾಹ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿ ಸಮೀಕ್ಷೆ ಮಾಡ್ತಿದ್ದಾರೆ. ಇಡೀ ಕರ್ನಾಟಕ ತುಂಬೆಲ್ಲಾ ಮಳೆಯಿದೆ ಎಂದರು. ಅಲ್ಲದೇ, ನಿಗಮ ಮಂಡಳಕ ಹೊಸಬರಿಗೆ ಅವಕಾಶ ಕೊಡ್ಬೇಕು ಅಂತ್ಹೇಳಿ ಪಕ್ಷದ ಹೈಕಮಾಂಡ್ ನಿರ್ಣಯ ತೆಗೆದುಕೊಂಡಿದೆ. ಹಂತ ಹಂತವಾಗಿ ಎಲ್ಲವೂ ಕ್ರಮ ಕೈಗೊಳ್ತಾರೆ. ರದ್ದು ಮಾಡಿರೋದ್ರಿಂದ ಏನು ಅಸಮಾಧಾನವಿಲ್ಲ. ಹಳೆ ಕಾರ್ಯಕರ್ತರು ಬಹಳ ದುಡಿದವರಿದ್ದಾರೆ. ಇದ್ರಲ್ಲಿ ಕೆಲವು ಮಂದಿ ದುಡಿಯಲಾರದೇ ಚೈನಿ ಹೊಡಿಯಲಿಕ್ಕತ್ತಿದ್ರು ಅದಕ್ಕಾಗಿ ಈ ನಿರ್ಣು ತೆಗೆದಿದ್ದಾರೆ ಎಂದರು.