ವಿಜಯಪುರ: ಹತ್ತು ವರ್ಷಗಳ ಹಿಂದೆ ನಡೆದ ಮರ್ಯಾದೆ ಹತ್ಯೆ ಕೇಸ್ ಕುಡಿದ ನಶೆಯಲ್ಲಿ ಆಡಿದ ಮಾತಿನಿಂದ ಬೆಳಕಿಗೆ ಬಂದಿದೆ.
ಕಳೆದ 2011ರಲ್ಲಿ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣ ನಿವಾಸಿ ಪ್ರಿಯಾಂಕಾ ಪಾಟೀಲ ಆಂಧ್ರ ಪ್ರದೇಶದಲ್ಲಿ ನಾಪತ್ತೆಯಾಗಿದ್ದಳು. ಪತಿ ಹುಚ್ಚಪ್ಪಗೌಡ ಪಾಟೀಲ ಪ್ರಿಯಾಂಕಾಳನ್ನು ಶ್ರೀಶೈಲಕ್ಕೆ ಕರೆದುಕೊಂಡು ಹೋದಾಗ ಪ್ರಿಯಾಂಕಾ ನಾಪತ್ತೆಯಾಗಿದ್ದಳು. ಆದ್ರೇ, ಪತಿ ಹುಚ್ಚಪ್ಪಗೌಡ 2011 ಜುಲೈ 24 ರಂದು ಪ್ರಿಯಾಂಕಾಳನ್ನು ಕೊಲೆಗೈದು, ನಾಪತ್ತೆಯಾಗಿದ್ದಾಳೆ ಎಂದು ಬಿಂಬಿಸಿದ್ದನು. ಆದ್ರೇ, ಎಲ್ಲರೂ ಇದನ್ನು ನಂಬಿ ಮರೆತು ಸುಮ್ಮನಾಗಿದ್ದರು. ಬಳಿಕ ಪ್ರಿಯಾಂಕಾಳ ತಾಯಿ 2021 ಜೂನ 1 ಕ್ಕೆ ಮುದ್ದೇಬಿಹಾಳ ಠಾಣೆಯಲ್ಲಿ ನಾಪತ್ತೆಯಾದ ಬಗ್ಗೆ ದೂರು ದಾಖಲಿಸಿದ್ದರು.
ಇನ್ನು ಪತಿ ಹುಚ್ಚಪ್ಪಗೌಡ ಪಟ್ಟಣದ ಬಾರ್ ನಲ್ಲಿ ಮದ್ಯ ಕುಡಿಯುತ್ತಿದ್ದ ವೇಳೆ ಅಮಲಿನಲ್ಲಿ ತಾನೇ ಪತ್ನಿಯನ್ನು ಕೊಲೆ ಮಾಡಿದ್ದಾಗಿ ಹೇಳಿಕೊಂಡಿದ್ದಾನೆ. ಇದನ್ನು ಪಕ್ಕದಲ್ಲಿದ್ದ ವ್ಯಕ್ತಿ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ತದನಂತರ ಪೊಲೀಸರು ಹುಚ್ಚಪ್ಪಗೌಡನಿಗೆ ತನಿಖೆ ನಡೆಸಿದಾಗ ಕೊಲೆ ಪ್ರಕರಣ ಬಯಲಾಗಿದೆ.
ಇದೀಗ್ ಹುಚ್ಚಗೌಡ ಪಾಟೀಲ, ಈತನ ಸಹೋದರ ಸಿದ್ದನಗೌಡ ಪಾಟೀಲ, ಕಾರ್ ಚಾಲಕ ಉಮೇಶ ಕಮಲಾಪುರನ್ನು ಪೊಲೀಸರ ಬಂಧಿಸಿದ್ದಾರೆ ಎಂದು ಎಸ್ ಪಿ ಆನಂದಕುಮಾರ ಮಾಹಿತಿ ನೀಡಿದರು.