ವಿಜಯಪುರ: ಅಕ್ರಮವಾಗಿ ಬೈಕ್ನಲ್ಲಿ ಮದ್ಯ ಸಾಗಿಸುವ ವೇಳೆಯಲ್ಲಿ ಲಾರಿಗೆ ಬೈಕ್ ಡಿಕ್ಕಿಯಾಗಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ದೇಗಿನಾಳ ಕ್ರಾಸ್ ಬಳಿ ನಡೆದಿದೆ.
ಕೊಟ್ನಾಳ ಗ್ರಾಮದ ರಾಮು ಬಂಗಾರಿ ಗಂಭೀರವಾಗಿ ಗಾಯಗೊಂಡಿದ್ದು, ಹಿಂಬದಿಯ ಸವಾರನಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಅಲ್ಲದೇ, ಡಿಕ್ಕಿ ಬಳಿಕ ಬೈಕ್ನಲ್ಲಿ ಸಾಗಾಟ ಮಾಡುತ್ತಿದ್ದ ಮದ್ಯದ ಬಾಟಲ್ ಒಡೆದು ಹೋಗಿವೆ. ಸ್ಥಳಕ್ಕೆ ಪೊಲೀಸ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇಂಡಿ ಗ್ರಾಮೀಣ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.