ವಿಜಯಪುರ: ಪ್ರಧಾನಿ ನರೇಂದ್ರ ಮೋದಿ ಹಾಗೂ ಸಿಎಂ ಯೋಗಿಗೆ ಕುಟಂಬ ಇಲ್ಲದ ನಾಯಕರು. ಆದರೆ ಕುಟುಂಬ ರಾಜಕಾರಣ ಇರೋದೆ ಸತ್ಯ ಎಂದು ಸಚಿವ ಉಮೇಶ ಕತ್ತಿ ಕುಟುಂಬ ರಾಜಕಾರಣವನ್ನು ಸಮರ್ಥನೆ ಮಾಡಿಕೊಂಡರು.
ನಗರದಲ್ಲಿ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ನಾವೆಲ್ಲರೂ ಕುಟುಂಬ ರಾಜಕಾರಣದಿಂದ ಬಂದವರು. ನನ್ನ ತಂದೆ ರಾಜಕಾರಣದಲ್ಲಿ ಇದ್ದರು, ಈಗ ನಾನೂ ಇದ್ದೇನೆ. ಯಡಿಯೂರಪ್ಪ ರಾಜಕಾರಣದಲ್ಲಿದ್ದರು.
ಈಗ ಅವರ ಪುತ್ರ ವಿಜಯೇಂದ್ರ ಕೂಡ ರಾಜಕಾರಣದಲ್ಲಿದ್ದಾರೆ. ಬಿಎಸ್ವೈಗೆ ವಯಸ್ಸು 80 ಆಗಿದೆ. ಈಗಲೂ ದುಡಿಯುವ ತಾಕತ್ತು, ಹಂಬಲ ಇದೆ. ಆದರೂ ಪಕ್ಷದ ನಿಯಮಾನುಸಾರ ನಿವೃತ್ತಿ ಘೋಷಿಸಿದ್ದು, ಪುತ್ರನಿಗೆ ರಾಜಕೀಯ ಸ್ಥಾನಮಾನ ಕಲ್ಪಿಸಲು ತೀರ್ಮಾನಿಸಿದ್ದಾರೆ ಎಂದರು.