ವಿಜಯಪುರ: ಬುರ್ಖಾಧಾರಿ ವ್ಯಕ್ತಿಯನ್ನು ವಿಚಾರಣೆ ನಡೆಸಲಾಗುತ್ತಿದೆ. ಆದ್ರೇ, ಅವರೊಬ್ಬ ತೃತೀಯ ಲಿಂಗಿ ಎಂದು ಗೊತ್ತಾಗಿದೆ ಎಂದು ವಿಜಯಪುರ ನಗರದಲ್ಲಿ ಎಸ್ಪಿ ಎಚ್ಡಿ ಆನಂದಕುಮಾರ ಮಾಹಿತಿ ನೀಡಿದರು.
ಆತನ ಹೆಸರು ಕಿಶೋರ ಎಂಬುದು ಗೊತ್ತಾಗಿದ್ದು, ಹಾಸನ ಮೂಲದವ ಎಂಬುದು ತಿಳಿದು ಬಂದಿದೆ. ಹೀಗಾಗಿ ಯಾರೂ ಆಘಾತಕ್ಕೆ ಒಳಗಾಗುವ ಅಗತ್ಯ ಇಲ್ಲ. ಸದ್ಯಕ್ಕೆ ದೊರಕಿರುವ ಮಾಹಿತಿ ಪ್ರಕಾರ ಯಾವುದೇ ವಿಷಯ ಇಲ್ಲ. ಯಾರೂ ಆತಂಕ ಪಡುವ ಅವಶ್ಯಕತೆ ಇಲ್ಲ ಎಂದರು.
ಅಲ್ಲದೇ, ಸಚಿವ ಉಮೇಶ ಕತ್ತಿ ಮಾಹಿತಿ ನೀಡಿ, ಈ ಬಗ್ಗೆ ಈಗಾಗಲೇ ಪೊಲೀಸ ಇಲಾಖೆ ತನಿಖೆಯಿಂದ ಮಾಹಿತಿ ಪಡೆದಿದ್ದು, ತನಿಖೆ ಸೂಚನೆ ನೀಡುತ್ತೇನೆ. ಅಲ್ಲದೇ, ನಾಳೆ ಆಲಮಟ್ಟಿಯಲ್ಲಿ ನೀರಾವರಿ ಸಲಹಾ ಸಮಿತಿ ಸಭೆ ಇದೆ. ಅಲ್ಲಿಯೇ ವಿವರಣೆ ಪಡೆಯುತ್ತೇನೆ ಎಂದರು.