ವಿಜಯಪುರ: ದ್ರಾಕ್ಷಿ ನಾಡಿನಲ್ಲಿ ಎಟಿಎಂ ಕಳ್ಳತನಕ್ಕೆ ಯತ್ನಿಸಿ ಆರೋಪಿ ಅಂದರ್ ಆಗಿರುವ ಘಟನೆ ವಿಜಯಪುರ ಜಿಲ್ಲೆಯ ತಿಕೋಟ ಪಟ್ಟಣದ ಬಸವೇಶ್ವರ ಸರ್ಕಲ್ ಹತ್ತಿರ ಇರುವ ಇಂಡಿಯಾ ಒನ್ ಎಟಿಎಂನಲ್ಲಿ ನಡೆದಿದೆ.
ಹಣ ಲಪಾಟಿಸಲು ಪ್ರಯತ್ನಿಸುತ್ತಿದ್ದಾಗ ರಾತ್ರಿ ಕರ್ತವ್ಯ ನಿರ್ವಹಿಸುತ್ತಿದ್ದ ಪೋಲಿಸ್ ಸಿಬ್ಬಂದಿ ಸುನೀಲ ಪೋತ ಹಾಗೂ ಸಾಬು ಕಾಂಬಳೆಯವರಿಂದ ಮಿಂಚಿನ ಕಾರ್ಯಾಚರಣೆ ನಡೆಸಿದ್ದಾರೆ.
ತಲೆಗೆ ಪ್ಲಾಸ್ಟೀಕ್ ಕಾಗದ ಹಾಕಿಕೊಂಡು ಕೈಯಲ್ಲಿ ಕಬ್ಬಿಣದ ರಾಡ್ ಹಿಡಿದುಕೊಂಡು ಎಟಿಎಂ ಒಳಗೆ ನುಗ್ಗಿ, ಎಟಿಎಂನಲ್ಲಿನ ಸಿಸಿ ಕ್ಯಾಮರಾ ಒಡೆದು , ಸೇಪ್ ಲಾಕರ್ ಹಾಗೂ ಪಾಸವರ್ಡ ಕೀ ಬೋರ್ಡ ಡ್ಯಾಮೇಜ್ ಮಾಡಿದ್ದಾನೆ. ಮಲ್ಲಿಕಾರ್ಜುನ ಮಾಳಿ ಕಳ್ಳತನಕ್ಕೆ ಯತ್ನಿಸಿ ಪೊಲೀಸರ ಅತಿಥಿ ಆಗಿದ್ದಾನೆ.
ಈ ಘಟನೆ ತಿಕೋಟಾ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ