ವಿಜಯಪುರ: ಕಳ್ಳರ ಗ್ಯಾಂಗ್ವೊಂದು ಮುಖಕ್ಕೆ ಟಾವೆಲ್ ಸುತ್ತಿಕೊಂಡು ವಿಜಯಪುರ ನಗರದ ಕನಕದಾಸ ಬಡಾವಣೆಯಲ್ಲಿ ಸಂಚರಿಸಿರುವ ಘಟನೆ ನಡೆದಿದೆ.
ಆರು ಜನರು ಇರುಬ ಟಾವೆಲ್ ಗ್ಯಾಂಗ್ನಲ್ಲಿ ಕೈಯಲ್ಲಿ ಹರಿತವಾದ ಆಯುಧ, ಬ್ಯಾಗ್ ಹಿಡಿದು ಕಳ್ಳತನಕ್ಕೆ ಯತ್ನ ಮಾಡಲು ಕನಕದಾಸ ಬಡಾವಣೆಯಲ್ಲಿ ಹೊಂಚು ಹಾಕಿ ಓಡಾಟ ಮಾಡಿದ್ದು, ಇದರ ಸಿಸಿಟಿವಿ ವಿಡಿಯೋ ಲಭ್ಯವಾಗಿದೆ. ಟಾವೆಲ್ ಗ್ಯಾಂಗ್ನಿಂದ ಜನತೆಯಲ್ಲಿ ಭಯ ಹುಟ್ಟಿಸಿದೆ. ಜಲನಗರ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.