ವಿಜಯಪುರ: ಅಂತರ್ ರಾಜ್ಯದಲ್ಲಿ ನೀರಿನ ಮೋಟಾರ್ ಪಂಪ್ಸ್ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ವಿಜಯಪುರ ಜಿಲ್ಲಾ ಗಾಂಧಿಚೌಕ್ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.
ಮಹಾರಾಷ್ಟ್ರದ ಅಜ್ಮೀರ ನಗರದ ಸಲೀಂ ಅಜ್ಮಲ್ ಶೇಖ್ ಬಂಧಿತ ಆರೋಪಿ. ಇನ್ನು ವಿಜಯಪುರ ನಗರದ ಇಂಡಿ ರಸ್ತೆಯ ಕೋರಿ ಚೌಕ್ ಬಳಿಯ ಗೋಡೌನ್ ಬೀಗ್ ಒಡೆದು ಲಕ್ಷಾಂತರ ಮೌಲ್ಯದ ನೀರಿನ ಪಂಪ್ಸ್ ಸೆಟ್ಸ್ಗಳು ಕದ್ದುಕೊಂಡು ಪರಾರಿಯಾಗಿದ್ದ. ಇದನ್ನು ಚಾಲೆಂಜಿಗ್ಯಾಗಿ ಗಾಂಧಿಚೌಕ್ ಪೊಲೀಸರು ತೆಗೆದುಕೊಂಡು ಆರೋಪಿಯನ್ನು ಮುಂಬೈನಲ್ಲಿ ಬಂಧಿಸಿ, 6,06,500 ಮೌಲ್ಯದ ಒಂದು ಗೂಡ್ಸ್ ವಾಹನ, 28 ನೀರಿನ ಮೋಟಾರ್ ಪಂಪ್ಸ್ ಸೆಟ್ಸ್ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಗಾಂಧಿಚೌಕ್ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.