ವಿಜಯಪುರ: ಕಾರ್ ಹಾಗೂ 2 ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿರುವ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ರಾಂಪುರ್ ಪಿಎ ಗ್ರಾಮದ ಬಳಿ ನಡೆದಿದೆ.
ಇನ್ನು ಅಪಘಾತದ ಬಳಿಕ KA 02 MK1348 ಕಾರ್ ಪಲ್ಟಿಯಾಗಿದೆ. ಅಲ್ಲದೇ, ಕಾರಿನಲ್ಲಿದ ಚಾಲಕ ಕಾರ್ ಸ್ಥಳದಲ್ಲಿ ಬಿಟ್ಟು ಪರಾರಿಯಾಗಿದ್ದಾನೆ. ಎರಡು ಬೈಕ್ಗಳ ಸವಾರರಾದ ರಾಜು ಯಡ್ರಾಮಿ, ಬಸವರಾಜ್ ಹಂಗರಗಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲು ಆಗಿದ್ದಾರೆ.
ಸಿಂದಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.