ವಿಜಯಪುರ: ಮುಖಕ್ಕೆ ಸಿಗರೆಟ್ ಹೊಗೆ ಬಿಟ್ಟಿದ್ದನ್ನು ಪ್ರಶ್ನಿಸಿದಕ್ಕೆ ಮೂವರು ಮಾರಣಾಂತಿಕವಾಗಿ ಕಬ್ಬಿಣದ ರಾಡ್ನಿಂದ ಯುವಕನ ಮೇಲೆ ಹಲ್ಲೆಗೈದಿರುವ ಘಟನೆ ವಿಜಯಪುರ ತಾಲ್ಲೂಕಿನ ಕನ್ನೂರ ಬಳಿ ನಡೆದಿದೆ.
ಮಲ್ಲಪ್ಪ ಬೆಳ್ಳುಂಡಗಿ ಹಲ್ಲೆಗೊಳಗಾದ ಯುವಕ. ಇನ್ನು ಅಕ್ಷಯ ಜುಳಜುಳಿ, ಸುನೀಲ್ ಮಾಳಿ, ಪ್ರಕಾಶ ಕುಂಬಾರ ಹಲ್ಲೆಗೈದು ಪರಾರಿಯಾಗಿದ್ದಾರೆ. ರವಿ ಎಂಬುವರ ಪಾನ್ ಶಾಪ ಬಳಿ ನಿಂತಿರುವಾಗ ಮೂವರು ಏಕಾಏಕಿ ಕಬ್ಬಿಣದ ರಾಡ್ನಿಂದ ಹಲ್ಲೆಗೈದಿದ್ದಾರೆ. ಗಾಯಗೊಂಡಿರುವ ಮಲ್ಲಪ್ಪ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಿಜಯಪುರ ಗ್ರಾಮೀಣ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.