ವಿಜಯಪುರ: ಮಾರ್ಕೆಟ್ನಲ್ಲಿ ನಿಲ್ಲಿಸಿದ ಬೈಕ್ನ್ನು ಕಳ್ಳನೋರ್ವ ಕಳ್ಳತನಗೈದು ಪರಾರಿಯಾಗಿರುವ ಘಟನೆ ವಿಜಯಪುರ ನಗರದ ಮೀನಾಕ್ಷಿ ಚೌಕ್ನಲ್ಲಿ ನಡೆದಿದೆ.
ಈರಣ್ಣಗೌಡ ಬಿರಾದಾರ ಎಂಬುವರ ಬೈಕ್ ಕಳ್ಳತನ ಆಗಿದೆ. ಇನ್ನು ಮೀನಾಕ್ಷಿನಲ್ಲಿ ಬೈಕ್ ನಿಲ್ಲಿಸಿ ಮಾರ್ಕೆಟ್ಗೆ ಹೋದಾಗ ಕಳ್ಳ ಬೈಕ್ ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದಾನೆ. ಕಳ್ಳತನದ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಗಾಂಧಿಚೌಕ್ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.