ವಿಜಯಪುರ: ಅಕ್ರಮವಾಗಿ ತಯಾರಿಸುತ್ತಿದ್ದ
ಕಳ್ಳಬಟ್ಟಿ ಸಾರಾಯಿ ಅಡ್ಡೆಯ ಮೇಲೆ ಅಬಕಾರಿ ಪೊಲೀಸರು ದಾಳಿಗೈದಿರುವ ಘಟನೆ ವಿಜಯಪುರ ಜಿಲ್ಲೆಯ ಕೊಲ್ಹಾರ ಪಟ್ಟಣದ ಮುಳವಾಡ ತಾಂಡಾ 2 ಹಾಗೂ ಮಲಘಾಣ ತಾಂಡಾದಲ್ಲಿ ನಡೆದಿದೆ.
ಸಂತೋಷ ಚವ್ಹಾಣ, ಸುರೇಶ ಚವ್ಹಾಣ, ಶಾರದಾ ಚವ್ಹಾಣ, ರೇಣುಕಾ ಚವ್ಹಾಣನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಅಲ್ಲದೇ, ಎರಡು ಪ್ರತ್ಯೇಕ ಪ್ರಕರಣದಲ್ಲಿ 229 ಕಳ್ಳಬಟ್ಟಿ ಸಾರಾಯಿ ಜಪ್ತಿಗೈದಿದ್ದಾರೆ. ಈ ಕುರಿತು ಅಬಕಾರಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.