ವಿಜಯಪುರ: ಜೈಲ್ ಆವರಣದಲ್ಲಿ ಅನುಮಾಸ್ಪದ ರೀತಿಯಲ್ಲಿ ಮೂರು ಮೊಬೈಲ್ ಪತ್ತೆಯಾಗಿರುವ ಘಟನೆ ವಿಜಯಪುರ ನಗರದ ಕೇಂದ್ರ ಆವರಣದಲ್ಲಿ ನಡೆದಿದೆ.
ಇನ್ನೂ ಕೇಂದ್ರ ಕಾರಾಗೃಹದ ಸೇಲ್ ಮೂರು, ನಾಲ್ಕು ಎದುರು ಮೂರು ಮೊಬೈಲ್ ಪತ್ತೆಯಾಗಿದೆ. ಆದ್ರೇ, ಮೊಬೈಲ್ ನಲ್ಲಿ ಸೀಮ್ ಕಾರ್ಡ್ ಇಲ್ಲ. ಈ ಮೊಬೈಲ್ ಯಾರು ಎಸೆದು ಹೋಗಿದ್ದಾರೆ ಎಂದು ಕೇಂದ್ರ ಕಾರಾಗೃಹದ ಪೊಲೀಸ ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ.
ಅದಕ್ಕಾಗಿ ತನಿಖೆ ಮಾಡುವಂತೆ ಜೈಲಾಧಿಕಾರಿ ಮ್ಯಾಗೇರಿ ದೂರು ದಾಖಲು ಮಾಡಲಾಗಿದೆ. ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಈ ಕುರಿತು ಆದರ್ಶನಗರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.