ವಿಜಯಪುರ: ಮಾಜಿ ಸಿಎಂ ಸಿದ್ದರಾಮೋತ್ಸವ ಆಚರಣೆಯಿಂದ ಭಯ ಪಡುವ ಅವಶ್ಯಕತೆ ಇಲ್ಲ. ಜನ್ಮ ಉತ್ಸವಕ್ಕೆ ಜನ ಹೋಗಿರಬಹುದು ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ವಿಜಯಪುರ ನಗರದಲ್ಲಿ ಭೂಮಿ ಪೂಜೆ ನೆರವೇರಿಸಿ, ನಂತರ ಮಾತನಾಡಿದ ಅವರು, ಹುಚ್ಚು ಭ್ರಮೆಯಲ್ಲಿ ಯಾರು ಇರೋದು ಬೇಡ. ಕರ್ನಾಟಕದ ಜನರೂ ಬಹಳ ಬುದ್ಧಿವಂತರಿದ್ದಾರೆ. ರಾಹುಲ್ ಗಾಂಧಿ ಸೂಚನೆಯ ನಂತರ ಡಿಕೆಶಿ ಮತ್ತಿ ಸಿದ್ಧರಾಮಯ್ಯ ಆಲಿಂಗನ ಮಾಡಿದ್ದಾರೆ.
ಅಪ್ಪಿಗೊಂಡು ಇಬ್ಬರು ನಾಶವಾಗಿ ಅಂತಾ ಹೇಳಿದ್ದಾನೆ. ದೇಶದಲ್ಲಿ ನಾಶ ನಾನು ಮಾಡ್ತಿದ್ದಿನಿ. ನೀವು ಕರ್ನಾಟಕದಲ್ಲಿ ಇಬ್ಬರು ಸೇರಿ ನಾಶ ಮಾಡಿ ಅಂತಾ ಅವರು ಸೊನ್ನೆ ಮಾಡಿದ್ದಾರೆ ಎಂದರು.