ವಿಜಯಪುರ: ಸಿಗರೆಟ್ ಹೊಗೆಗಾಗಿ ವ್ಯಕ್ತಿಯ ಮೇಲೆ ಓರ್ವ ರಾಡ್ನಿಂದ ಹಲ್ಲೆಗೈದಿರುವ ಸಿಸಿಟಿವಿ ವಿಡಿಯೋ ಲಭ್ಯವಾಗಿರುವ ಘಟನೆ ವಿಜಯಪುರ ತಾಲ್ಲೂಕಿನ ಕನ್ನೂರ ಗ್ರಾಮದಲ್ಲಿ ನಡೆದಿದೆ.
ಮಲ್ಲಪ್ಪ ಬೆಳ್ಳುಂಡಗಿಗೆ ಓರ್ವ ಮಾರಣಾಂತಿಕವಾಗಿ ರಾಡ್ನಿಂದ ಹಲ್ಲೆಗೈದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇನ್ನು ಅಕ್ಷಯ್, ಸುನೀಲ, ಕುಂಬಾರ ಹಲ್ಲೆಗೈದು ಪರಾರಿಯಾಗಿದ್ದಾರೆ. ಈ ಘಟನೆ ಕಳೆದ ಆಗಷ್ಟ್ 3 ರಂದು ನಡೆದಿದ್ದು, ರವಿ ಪಾನ್ಶಾಪ್ ಎದುರಿನ ಅಂಗಡಿಯಲ್ಲಿರುವ ಸಿಸಿಟಿವಿಯಲ್ಲಿ ಸೆರೆಯಾಗಿದೆ. ವಿಜಯಪುರ ಗ್ರಾಮೀಣ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.