ವಿಜಯಪುರ: ಮನೆಯಲ್ಲಿ ಯಾರು ಇಲ್ಲದ ವೇಳೆಯಲ್ಲಿ ಕಳ್ಳರು ಮನೆಯ ಬೀಗ ಒಡೆದ ಲಕ್ಷಾಂತರ ಮೌಲ್ಯದ ಚಿನ್ನ, ಬೆಳ್ಳಿ ದೋಚಿಕೊಂಡು ಪರಾರಿಯಾಗಿರುವ ಘಟನೆ ವಿಜಯಪುರದ ರಹೀಂನಗರದಲ್ಲಿ ನಡೆದಿದೆ.
ಸೀರಿನ್ ದಫೇದಾರ್ ಎಂಬುವರ ಮನೆಯಲ್ಲಿ ಕಳ್ಳತನ ಆಗಿದೆ. 6 ತೊಲಿ ಚಿನ್ನ, ಅರ್ಧ ಕೆಜಿ ಬೆಳ್ಳಿ ಸೇರಿದಂತೆ ಬೆಲೆಬಾಳುವ ವಸ್ತುಗಳು ಕಳ್ಳತನವಾಗಿದೆ. ಮನೆ ಮಾಲೀಕ ದಫೇದಾರ್ ಮಹಾರಾಷ್ಟ್ರಕ್ಕೆ ಹೋಗಿದ ಸಂದರ್ಭದಲ್ಲಿ ಕಳ್ಳತನವಾಗಿದೆ. ಗಾಂಧಿಚೌಕ್ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.