ವಿಜಯಪುರ: ಯುಎಸ್ಎನಲ್ಲಿ ಉದ್ಯೋಗ ನೀಡುವ ಆಮಿಷ ನೀಡಿ ಲಕ್ಷಾಂತರ ನಗದು ಮೋಸಗೈದಿರುವ ಘಟನೆ ವಿಜಯಪುರ ನಗರದ ಇಬ್ರಾಹಿಮಪುರ ರೈಲ್ವೆ ಗೇಟ್ ಬಳಿ ನಡೆದಿದೆ.
ಜಾಹೀದ್ ಹುಸೇನ್ ಖಾಜಿ ಮೋಸ ಹೋದವರು. ಇನ್ನು ಶೇರಿನ್ ಕ್ಸೇವಿಯರ್ ಮೋಸ ಮಾಡಿದ್ದು, ಯುಎಸ್ಎನಲ್ಲಿ ಉದ್ಯೋಗ ಕೊಡಿಸುವ ಆಮಿಷ ನೀಡಿ 4.20 ಲಕ್ಷ ನಗದು ಆನ್ಲೈನ್ ಮೂಲಕ ಪಡೆದುಕೊಂಡು ಮೋಸ ಮಾಡಿದ್ದಾರೆ. ಅದಕ್ಕಾಗಿ ಆರೋಪಿ ವಿರುದ್ಧ ಕೇಸ್ ದಾಖಲು ಮಾಡಿದ್ದಾರೆ. ಇನ್ನು ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ತನಿಖೆ ಕೈಗೊಂಡಿದ್ದಾರೆ. ಈ ಕುರಿತು ಗೋಳಗುಮ್ಮಟ್ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.