ವಿಜಯಪುರ: ನಾನು ಎಲ್ಲರಿಗೂ ಸಿಂಹಸ್ವಪ್ನವಾಗಿದ್ದೇನೆ. ಅಲ್ಲದೇ, ಹಿಂದಿನವರೂ ಯಾರು ಇಷ್ಟೊಂದು ಅನುದಾನ ತಂದಿಲ್ಲ ಸಂಸದ ರಮೇಶ ಜಿಗಜಿಣಗಿ ಹೇಳಿದರು.
ನಗರದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಯೋಜನೇತರ ಭಾಗವಾಗಿ ಲಕ್ಷ, ಕೋಟಿ ಅನುದಾನ ತಂದಿರುವೆ. ಇಷ್ಟೊಂದು ಅನುದಾನ ಯಾರಾದರೂ ತಂದಿದ್ದಾರೆಯೇ..? ಇದ್ದರೆ ಗಾಂಧಿವೃತ್ತದಲ್ಲಿ ಬಹಿರಂಗ ಚರ್ಚೆಗೆ ಬನ್ನಿ ಎಂದು ಆಗಲೇ ಪಂಥಾಹ್ವಾನ ನೀಡಿದರು. ನಾನು ಒಬ್ಬ ಸಿಂಹ, ನಾನು ಅನೇಕರ ಕನಸಿನಲ್ಲಿ ಸಿಂಹಸ್ವಪ್ನವಾಗಿ ಕಾಡುತ್ತಿರುವೆ ಎಂದರು.
ಅಲ್ಲದೇ, ವಿಜಯಪುರ ಪ್ರವಾಸಿ ಮಂದಿರದಿಂದ
ತೆಲಸಂಗ ಕ್ರಾಸ್ ವರೆಗೆ ಸರಿಸುಮಾರು 40 ಕೀ.ಮೀ. ಕಾಮಗಾರಿಗೆ 250 ಕೋಟಿ ಮಂಜೂರು ಮಾಡಲಾಗಿದ್ದು, ಶೀಘ್ರವೇ ಕಾಮಗಾರಿಗೆ ಚಾಲನೆ ನೀಡಲಾಗುವುದು. ರಾಷ್ಟ್ರೀಯ ಹೆದ್ದಾರಿ ವಿಜಯಪುರ ಉಪ ವಿಭಾಗದಿಂದ ಹಲವಾರು ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.
ತೆಲಸಂಗ ಕ್ರಾಸ್ ವರೆಗಿನ ರಸ್ತೆ ಪ್ರಗತಿಗೆ 250 ಕೋಟಿ ಅನುದಾನ ಮಂಜೂರಾಗಿದ್ದು, ಎರಡು ವರ್ಷಗಳ ಅವಧಿ ನಿಗದಿಗೊಳಿಸಲಾಗಿದೆ ಎಂದರು.