ವಿಜಯಪುರ: ಅಮಾಯಕ ಮಹಿಳೆಯ ಬಳಿಯಿದ್ದ 40 ಸಾವಿರ ಹಣವನ್ನು ಕಳ್ಳರು ದೋಚಿಕೊಂಡು ಪರಾರಿಯಾಗಿರುವ ಘಟನೆ ವಿಜಯಪುರ ಜಿಲ್ಲೆಯ ಚಡಚಣ ಪಟ್ಟಣದಲ್ಲಿ ನಡೆದಿದೆ.
ಪಟ್ಟಣಕ್ಕೆ ಸಂತೆಗೆ ಬಂದಿದ್ದ ಮಹಾರಾಷ್ಟ್ರದ ಸಿದ್ದಾಪುರ ಗ್ರಾಮದ ಸರೋಜಿನಿ ಓಗಸಿದ್ದ ನಾಂರೆ ಬಳಿಯಿದ್ದ 40 ಸಾವಿರ ಎಗರಿಸಲಾಗಿದೆ. ಕಿವಿಯೋಲೆ ತರಲೆಂದು ಬಂಗಾರ ಅಂಗಡಿಗೆ ಹೋಗಿದ್ದ ಸರೋಜಿನಿ ಬಳಿ ಇಬ್ಬರು ಪರಸ್ಪರ ಜಗಳಾಡಿದಂತೆ ಮಾಡಿ ಸರೋಜಿನಿ ಮೈಮೇಲೆ ಬಿದ್ದಿದ್ದಾರೆ. ಈ ವೇಳೆ ಹಣ ಕಳುವಾಗಿದೆ. ಚಡಚಣ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.