K1N ಡೆಸ್ಕ್: KGF ಪ್ರಶಾಂತ್ ನೀಲ್ ನಿರ್ದೇಶನದ ಮತ್ತೊಂದು ಬಿಗ್ ಬಜೆಟ್ ಸಿನಿಮಾ ‘ಸಲಾರ್’ ಪ್ರೇಕ್ಷಕರಿಗೆ ಅಪ್ಡೇಟ್ ನೀಡಿದೆ. ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಮಾಡುತ್ತಿರುವ ‘ಸಲಾರ್’ ಇತ್ತೀಚೆಗೆ ಹೊಸ ಪೋಸ್ಟರ್ ಹಾಕಿ ಆಗಷ್ಟ್. 15 ರಂದು ಚಿತ್ರದ ಕುರಿತು ದೊಡ್ಡ ಅನೌನ್ಸ್ ಮೆಂಟ್ ಮಾಡುತ್ತೇವೆ ಎಂದಿತ್ತು.
ಪ್ರಭಾಸ್ ರವರ ‘ಸಾಹೋ’, ರಾಧೆ ಶ್ಯಾಮ್’ ಸಿನಿಮಾಗಳು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿಲ್ಲ. ಕೆಜಿಎಫ್ -2 ಯಶಸ್ಸಿನ ನಂತರ ಪ್ರಶಾಂತ್ ನೀಲ್ ನಿರ್ದೇಶನ ಮಾಡುತ್ತಿರುವ ದೊಡ್ಡ ಚಿತ್ರ ಇದಾಗಿರುವುದರಿಂದ ‘ಸಲಾರ್’ ಬಗ್ಗೆ ನಿರೀಕ್ಷೆ ಹೆಚ್ಚು ಆಗಿದೆ.
ಇದೀಗ್ ಚಿತ್ರ ತಂಡ ಹೊಸ ಪೋಸ್ಟರ್ ಹಂಚಿಕೊಂಡು, ‘ರೆಬೆಲಿಂಗ್ ವರ್ಲ್ಡ್ ವೈಡ್ ಸೆ.28 2023’ ಎಂದು ಉಲ್ಲೇಖಿಸುವ ಮೂಲಕ ಚಿತ್ರ ರಿಲೀಸ್ ಡೇಟ್ ಅನೌನ್ಸ್ ಮಾಡಿದೆ. ಇದರೊಂದಿಗೆ ನಾಯಕ ನಟ ಪ್ರಭಾಸ್ ಕೂಡ ಪೋಸ್ಟರ್ ಹಂಚಿಕೊಂಡಿದ್ದಾರೆ.