ವಿಜಯಪುರ: ದಾರಿಹೋಕರನ್ನು ಅಡ್ಡಗಟ್ಟಿ ದರೋಡೆ ಮಾಡುತ್ತಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿರುವ ಘಟನೆ ವಿಜಯಪುರದ ಇಟ್ಟಂಗಿಹಾಳ ಕ್ರಾಸ್ ಹತ್ತಿರ ನಡೆದಿದೆ ಎಂದು ನಗರದಲ್ಲಿ ಎಸ್ಪಿ ಎಚ್ಡಿ ಆನಂದಕುಮಾರ ಮಾಹಿತಿ ನೀಡಿದರು.
ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ವಿಜು ಅಲಿಯಾಸ್ ವಿಜಯ ಭೀರಪ್ಪ ಕರಾಡೆ (23), ಆನಂದ ಮಾಯಪ್ಪ ಡೇರರೆ, ಸಚಿನ ಮಧು ಗೋಪಣೆ(20), ನವನಾಥ ಅಮಗೊಂಡ ಕರಾಡೆ(20), ಸಚಿನ ವಿಲಾಸ ಕಾಳೆ (21), ವಿಕಾಸ ಲಕ್ಣ್ಮಣ ಢಾಣೆ (20) ಹಾಗೂ ಹಣಮಂತ ಜಯಪ್ಪ ಖರಾತ (20) ಬಂಧಿತ ಆರೋಪಿಗಳು.
ಇವರಿಂದ 28 ಸಾವಿರ ರೂ. ಮೌಲ್ಯದ ಎರಡು ಮೊಬೈಲ್, 2500 ರೂ.ಮೌಲ್ಯದ ಕೈಗಡಿಯಾರ, 8200 ರೂ.ನಗದು, ಬೈಕ್ ಸೇರಿ ಒಟ್ಟು 5.13 ಲಕ್ಷ ರೂ.ಮೌಲ್ಯದ ಸಾಮಗ್ರಿ ವಶಕ್ಕೆ ಪಡೆಯಲಾಗಿದೆ ಎಂದರು.
ಎಸ್ಪಿ ಎಚ್.ಡಿ. ಆನಂದಕುಮಾರ ಮಾರ್ಗದರ್ಶನದಲ್ಲಿ ಡಿವೈಎಸ್ ಪಿ ಸಿದ್ಧೇಶ್ವರ, ಸಿಪಿಐ ಸಂಗಮೇಶ ಫಾಲಬಾವಿ, ಪಿಎಸ್ ಐ ಜಿ.ಎಸ್. ಉಪ್ಪಾರ, ಆರ್.ಎ.ದಿನ್ನಿ ನೇತೃತ್ವದಲ್ಲಿ ಸಿಬ್ಬಂದಿಯಾದ ಎಂ.ಎನ್.ಮುಜಾವರ, ಐ.ವೈ. ದಳವಾಯಿ, ಎ.ಎಸ್. ಬಿರಾದಾರ, ಗುರು ಹಡಪದ, ಎಂ.ಎಚ್. ಬಂಕಲಗಿ, ಬಿ.ವಿ. ಪವಾರ, ಹಣಮಂತ ಬಿರಾದಾರ, ಎಂ.ಎಸ್.ಮೇಟಿ, ಹಣಮಂತ ಗೊಳಸಂಗಿ, ಪಿ.ಸಿ.ಬಾವೂರ ಇವರನ್ನೊಳಗೊಂಡ ತಂಡ ಕಾರ್ಯಾಚರಣೆ ನಡೆಸಿತ್ತು.