ವಿಜಯಪುರ: ವಿಜಯಪುರದಲ್ಲಿ ಮತ್ತೊಂದು ಅಭಿಯಾನ ಶುರುವಾಗಿದೆ. ವಿಜಯಪುರ ಜಿಲ್ಲಾ ಶ್ರೀರಾಮಸೇನೆ ಘಟಕದಿಂದ ಗಣೇಶ ಮೂರ್ತಿಯ ಜೊತೆಗೆ ಸಾವರ್ಕರ್ ಮೂರ್ತಿ ಅಥವಾ ಫೋಟೋ ಇಡಲು ಅಭಿಯಾನ ಮಾಡುತ್ತಿದ್ದಾರೆ.
ಇನ್ನೂ ಮಾಜಿ ಸಿಎಂ ಸಿದ್ದರಾಮಯ್ಯಗೆ ಟಕ್ಕರ್ ನೀಡಲು ಅಭಿಯಾನ ಆರಂಭವಾಗಿದೆ. ಅಲ್ಲದೇ,
ಸಾವರ್ಕರ್ ಮೂರ್ತಿ ಜೊತೆ ಗಣೇಶ ಮಂಟಪದಲ್ಲಿ ಸಾವರ್ಕರ್ ಬಗ್ಗೆ ಸಾಕ್ಷಿಚಿತ್ರ ಪ್ರದರ್ಶನಕ್ಕೆ ನಿರ್ಧಾರ ಮಾಡಿದ್ದು, ವಿಜಯಪುರದ 250ಕ್ಕೂ ಅಧಿಕ ಗಣೇಶ ಮಂಟಪದಲ್ಲಿ ಸಾವರ್ಕರ್ ಬಗ್ಗೆ ಜನರಿಗೆ ಶ್ರೀರಾಮ ಸೇನೆ ತಿಳಿವಳಿಕೆ ನೀಡಲಿದ್ದಾರೆ. ಈ ಮೂಲಕ ಶ್ರೀರಾಮ ಸೇನೆಯ ಅಭಿಯಾನದ ಮೂಲಕ ಜಿಲ್ಲೆಯಲ್ಲಿ ಸಾವರ್ಕರ್ ಅಭಿಯಾನ ಜೋರಾಗಿದೆ.