ವಿಜಯಪುರ: ದೇಶದ ಯಾವುದೇ ಮೈದಾನದಲ್ಲಿ ಗಣೇಶನ ಮೂರ್ತಿಗಳನ್ನು ಪ್ರತಿಷ್ಟಾಪಿಸಬಹುದು ಎಂದು ವಿಜಯಪುರ ನಗರದಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ನಗರದಲ್ಲಿ ನಡೆದ ಸಭೆಯ ಬಳಿಕ ಮಾತನಾಡಿದ ಅವರು, ಯಾವುದೇ ಮೈದಾನವಿರಲಿ ಅದು ಕರ್ನಾಟಕ ಸರ್ಕಾರ ಭಾರತ ಸರ್ಕಾರದ ಆಸ್ತಿ. ಅಲ್ಲಿ ಗಣಪತಿ ಕೂಡಿಸಬೇಡಿ ಎಂದು ಹೇಳುವ ಆಧಿಕಾರ ಯಾರಿಗೂ ಇಲ್ಲ.
ಈದ್ಗಾ ಮೈದಾನ ವರ್ಷಕ್ಕೊಮ್ಮೆ ನಮಾಜ್ ಮಾಡಲು ಅಷ್ಟೇ.
ಈದ್ಗಾ ಮೈದಾನಗಳಲ್ಲಿ ಗಣಪತಿಯನ್ನೂ ಕೂಡಿಸುತ್ತೇವೆ, ರಾಷ್ಟ್ರಧ್ವಜವನ್ನೂ ಹಾರಿಸುತ್ತೇವೆ. ನಾಳೆ ದೇವಿಯ ಮೂರ್ತಿಯನ್ನೂ ಕೂಡಿಸುತ್ತೇವೆ ಎಂದರು.