ವಿಜಯಪುರ: ಅಕ್ರಮ ಮದ್ಯ ಸಾಗಾಟ ವೇಳೆಯಲ್ಲಿ ಅಬಕಾರಿ ಪೊಲೀಸರು ದಾಳಿಗೈದು ಲಕ್ಷಾಂತರ ಮೌಲ್ಯದ ಮದ್ಯ ವಶಕ್ಕೆ ಪಡೆದುಕೊಂಡಿರುವ ಘಟನೆ ವಿಜಯಪುರ ತಾಲ್ಲೂಕಿನ ಅಲಿಯಾಬಾದ್ ಗ್ರಾಮದ ಬಳಿ ನಡೆದಿದೆ.
ಗೋವಾದಿಂದ ಅಕ್ರಮವಾಗಿ ಸಾಗಿಸುತ್ತಿದ್ದ 4.80 ಲಕ್ಷ ಮೌಲ್ಯದ ಸುಮಾರು 10 ಪೆಟ್ಟಿಗೆ ಮದ್ಯ ವಶಕ್ಕೆ ಪಡೆದಿದ್ದಾರೆ. ಕೃಷ್ಣಾ ರಘುನಾಥ ಕರಪೆ ಹಾಗೂ ಬೀರು ರಾಘು ಮಾನವರ ಬಂಧಿತ ಆರೋಪಿಗಳು. ಈ ಕುರಿತು ವಿಜಯಪುರ ಅಬಕಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು ದಾಳಿ ವೇಳೆಯಲ್ಲಿ ಪೇದೆಗಳಾದ ಭೀಮಣ್ಣ ಕುಂಬಾರ, ಈರಣ್ಣ ಹಟ್ಟಿ, ಪರಶುರಾಮ ತೆಲಗಿ ದಾಳಿಯಲ್ಲಿ ಪಾಲ್ಗೊಂಡಿದ್ದರು.