ವಿಜಯಪುರ: ಹಾಡುಹಗಲೇ ಬಾಲಕಿ ಕಿಡ್ನ್ಯಾಪ್ಗೆ ಯತ್ನಿಸಿರುವ ಘಟನೆ ವಿಜಯಪುರದ ಮುಕುಂದ ನಗರದಲ್ಲಿ ನಡೆದಿದೆ.
8 ವರ್ಷದ ಸೌಂದರ್ಯ ಬಿರಾದಾರಕಿಡ್ನ್ಯಾಪ್ಗೆ ಯತ್ನ ಆಗಿದೆ. ಅಲ್ಲದೇ, ಸೌಂದರ್ಯ ರಸ್ತೆಯಲ್ಲಿ ಹೋಗುವಾಗ ಅಪರಿಚಿತ ವ್ಯಕ್ತಿಯಿಂದ ಕಿಡ್ನ್ಯಾಪ್ಗೆ ಯತ್ನಿಸಿದ್ದು, ಸೌಂದರ್ಯ ಕಿರುಚಾಟ ಹಾಗೂ ಸ್ಥಳದಲ್ಲಿದ್ದ ಜನರಿಂದ ಭಯಭೀತರಾಗಿ ವ್ಯಕ್ತಿ ಓಡಿ ಹೋಗಿದ್ದಾನೆ. ಇನ್ನು ಓಡಿ ಹೋಗುವ ವಿಡಿಯೋ ಪಕ್ಕದ ಮನೆಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಗೋಳಗುಮ್ಮಟ್ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.